FOOD | ಸಿಹಿ ತಿನ್ಬೇಕು ಅನಿಸಿದ್ರೆ ಹೆಲ್ತಿ ಮಖಾನಾ ಖೀರ್‌ ತಿನ್ನಿ, ರೆಸಿಪಿ ಇಲ್ಲಿದೆ..

  • ಮಖಾನ – 1 ಬಟ್ಟಲು
  • ಹಾಲು – 4 ಬಟ್ಟಲು
  • ಸಕ್ಕರೆ – ಅರ್ಧ ಬಟ್ಟಲು
  • ಏಲಕ್ಕಿ ಪುಡಿ – ಅರ್ಧ ಚಮಚ
  • ಡ್ರೈಫ್ಲ್ರೂಟ್ಸ್-ಸ್ವಲ್ಪ
  • ತುಪ್ಪ – ಹುರಿಯಲು ಬೇಕಾಗುವಷ್ಟು
  • ಕೇಸರಿ ದಳ- ಸ್ವಲ್ಪ

ಮಾಡುವ ವಿಧಾನ

  • ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಮಖಾನವನ್ನು ಗರಿಗರಿಯಾಗುವವರೆಗೆ ಹುರಿಯಿರಿ.
  • ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿಕೊಳ್ಳಿ. ಬಳಿಕ ಹುರಿದ ಮಖಾನಾ, ಸಕ್ಕರೆ ಮತ್ತು ಏಲಕ್ಕಿ ಪುಡಿ, ಕೇಸರಿಯನ್ನು ಹಾಲಿಗೆ ಸೇರಿಸಿ.
  • ಮಿಶ್ರಣವನ್ನು ದಪ್ಪವಾಗಿ, ಕ್ರೀಮ್‌ನಂತೆ ಸ್ಥಿರತೆಯನ್ನು ತಲುಪುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ.
  • ನಂತರ ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್’ನ್ನು ಮಿಶ್ರಣ ಮಾಡಿ. ಇದೀಗ ರುಚಿಕರವಾದ ಮಖಾನಾ ಸವಿಯಲು ಸಿದ್ಧ.
- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!