‘ಯುವ’ ರಾಜನ ಅರಸಿಯಾಗಿ ಮೂಗುತಿ ಸುಂದರಿ ಸಪ್ತಮಿ ಗೌಡ ಆಯ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಅವರ​ ‘ಯುವ’ ಸಿನಿಮಾಗೆ ಕಾಂತಾರ ಬ್ಯೂಟಿ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಯುವ’ ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಸಿನಿಮಾದಲ್ಲಿ ರಾಘವೇಂದ್ರ​ ರಾಜ್​ಕುಮಾರ್​ ಕಿರಿಯ ಪುತ್ರ ‘ಯುವ’ ರಾಜ್​ಕುಮಾರ್​ ಅಭಿನಯಿಸುತ್ತಿದ್ದು, ಅಪ್ಪು ಮಾಡಬೇಕಾಗಿದ್ದ ಚಿತ್ರದಲ್ಲಿ ಯುವ ನಟಿಸ್ತಿದ್ದಾರೆ ಅಂತಾ ಗೊತ್ತಾದ ಘಳಿಗೆಯಿಂದ ದೊಡ್ಮನೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.
ಈ ಯುವರಾಜನಿಗೆ ಯಾರು ರಾಣಿ ಯಾರು ಆಗ್ತಾರೆ ಅಂತಾ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಆಗಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ‘ಯುವ’ ನಾಯಕಿ ಗೊಂದಲಕ್ಕೆ ತೆರೆ ಎಳೆದಿದೆ. ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ಫೋಟೋವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​, “ಯುವರಾಜನ ಅರಸಿಗೆ ಆದರದ ಸ್ವಾಗತ” ಎಂದು ಬರೆದು ಕೊಂಡಿದೆ. ಜೊತೆಗೆ ‘ಯುವ’ ಸಿನಿಮಾಗೆ ಸಪ್ತಮಿ ಗೌಡ ಪರ್ಫೆಕ್ಟ್​ ನಾಯಕಿ ಎಂದು ಹೇಳಿದೆ. ಈ ಮೂಲಕ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿಯಾಗಿ ಫೈನಲ್​ ಆಗಿದ್ದಾರೆ.

ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬದಂದು ಯುವ ಚಿತ್ರದ ಶೂಟಿಂಗ್​​ ಆರಂಭ ಆಗಲಿದ್ದು, 2023ರ ಡಿಸೆಂಬರ್ 22ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!