June 1, 2026
Monday, June 1, 2026
spot_img

SHOCKING | ಡೆಲಿವರಿ ಮಾಡಿಸೋಕೆ ಹೋಗಿ ಮಗುವನ್ನು ಜೋರಾಗಿ ಎಳೆದ ಆಶಾ ಕಾರ್ಯಕರ್ತೆ, ಕಂದಮ್ಮ ಎರಡು ಭಾಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದಲ್ಲಿ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ.

ಓವರ್‌ ಕಾನ್ಫಿಡೆನ್ಸ್‌ ಹಾಗೂ ಅತಿಯಾದ ನಿರ್ಲಕ್ಷ್ಯದಿಂದ ಆಶಾ ಕಾರ್ಯಕರ್ತೆಯೊಬ್ಬರು ಡೆಲಿವರಿಗೆ ಮುಂದಾಗಿದ್ದು, ಮಗುವಿನ ತಲೆ ತಾಯಿಯ ಗರ್ಭದಲ್ಲೇ ಉಳಿದು ದೇಹ ಮಾತ್ರ ಹೊರಕ್ಕೆ ಬಂದಿದೆ.

ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿಗೆ ಇದ್ದಕ್ಕಿದ್ದಂತೆಯೇ ಹೊಟ್ಟೆನೋವು ಕಾಣಿಸಿದೆ. ತಕ್ಷಣ ಅವರನ್ನು ಕುದ್ರಾಹಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಂಬುಲೆನ್ಸ್‌ ಬಳಸಲಾಗಿತ್ತು. ಇನ್ನೇನು ಆಸ್ಪತ್ರೆ ತಲುಪಲು ಎರಡೇ ನಿಮಿಷ ಇದೆ ಎನ್ನುವಾಗ ಅತಿಯಾದ ನೋವು ಬಾಧಿಸಿದೆ.

ಈ ವೇಳೆ ಇನ್ನೆರಡು ನಿಮಿಷ ಕಾಯದೇ ತಾನೇ ಪ್ರಾಣ ಉಳಿಸುತ್ತೇನೆಂದು ಆಶಾ ಕಾರ್ಯಕರ್ತೆಯೊಬ್ಬರು ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಮಹಿಳೆಗೆ ಎಪಿಡ್ಯುರಲ್‌ ಇಂಜೆಕ್ಷನ್‌ ನೀಡಿ, ನಾರ್ಮಲ್‌ ಡೆಲಿವರಿ ಮಾಡಿಸಲು ಯತ್ನಿಸಿದ್ದಾರೆ.

ಈ ವೇಳೆ ಕಂದಮ್ಮನನ್ನು ಜೋರಾಗಿ ಎಳೆದಿದ್ದು, ದೇಹ ಹೊರಕ್ಕೆ ಬಂದಿದೆ. ಆದರೆ ತಲೆ ಗರ್ಭದಲ್ಲಿಯೇ ಉಳಿದಿದೆ. ಮಗು ಭೀಕರವಾಗಿ ಸತ್ತುಹೋಗಿದೆ.

ತಮ್ಮ ತಪ್ಪಿನಿಂದ ಮಗು ಸಾವನ್ನಪ್ಪಿದ್ದನ್ನು ಕಂಡು ಭಯಭೀತರಾದ ಆರೋಗ್ಯ ಕಾರ್ಯಕರ್ತರು, ಸತ್ಯವನ್ನು ಮರೆಮಾಚಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡಿದ ವೈದ್ಯರು ದಂಗಾಗಿ ಹೋಗಿದ್ದಾರೆ. ತಾಯಿಯ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ತಾಯಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !