ಯಾಕೆ ಇಷ್ಟು ನೋಯಿಸುತ್ತಿದ್ದೀರ? ನನ್ನ ಮೇಲೆ ಇಷ್ಟೊಂದು ದ್ವೇಷವೇಕೆ? ರಶ್ಮಿಕಾ ಎಮೋಷನಲ್‌ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್, ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ಚಿತ್ರದ ಮೂಲಕ ದೇಶಾದ್ಯಂತ ಫ್ಯಾನ್‌ ಫಾಲೋಯಿಂಗ್‌ ಹೆಚ್ಚಿಸಿಕೊಂಡ ರಶ್ಮಿಕಾ ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಇಷಟೊಂದು ಖಾಯೆತಿ ಪಡೆದ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಬರುತ್ತಿರುವ ಟ್ರೋಲ್‌ ಮತ್ತು ವದಂತಿಗಳ ಬಗ್ಗೆ ಬೇಸರಗೊಂಡಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಎಷ್ಟೊಂದು ಕಷ್ಟ ಪಡುತ್ತಿದ್ದಾರೆ ಆದರೆ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಪ್ರಚಾರ ಮಾಡುತ್ತಿರುವುದು ನನ್ನ ಮನ ನೋಯಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಹಲವಾರು ವಿಷಯಗಳು ನನ್ನನ್ನು ಕಾಡುತ್ತಿವೆ. ಈಗ ಅವೆಲ್ಲವುಗಳನ್ನು ಸರಿಪಡಿಸುವ ಸಮಯ ಬಂದಿದೆ. ಈಗ ನಾನು ನನಗಾಗಿ ಮಾತ್ರ ಮಾತನಾಡುತ್ತೇನೆ ಇದನ್ನು ವರ್ಷಗಳ ಹಿಂದೆಯೇ ನಾನು ಮಾಡಬೇಕಾಗಿತ್ತು. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ಇದುವರೆಗೂ ಅನೇಕ ಬಾರಿ ದ್ವೇಷಿಸಲ್ಪಟ್ಟಿದ್ದೇನೆ. ತುಂಬಾ ಟ್ರೋಲ್‌ಗಳು, ನೆಗೆಟಿವಿಟಿಯಿಂದ ತುಂಬಾ ನೊಂದಿದ್ದೇನೆ. ನಾನು ಏನೆಂದು ನನಗೆ ಗೊತ್ತು ಆಯ್ಕೆಮಾಡಿದ ಜೀವನ ತುಂಬಾ ಕಷ್ಟಕರವಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನೀವು ನನ್ನನ್ನು ಇಷ್ಟಪಡದಿದ್ದರೆ ಬೇಡ ಆದರೆ, ನನ್ನ ಮೇಲೆ ನಕಾರಾತ್ಮಕವಾಗಿ ವರ್ತಿಸಬೇಡಿ. ನಾನು ಮಾಡುವ ಕೆಲಸದ ಮಹತ್ವದ ಬಗ್ಗೆ ನನಗೆ ತಿಳಿದಿದೆ.

ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಟ್ರೋಲ್ ಮಾಡಿ ನನ್ನ ಮೇಲೆ ನೆಗೆಟಿವಿಟಿ ಹರಡುತ್ತಿರುವುದು ಹೃದಯವಿದ್ರಾವಕವಾಗಿದೆ. ಅವೆಲ್ಲವೂ ನನ್ನನ್ನು ಖಿನ್ನತೆಗೆ ಒಳಪಡಿಸುತ್ತಿವೆ ಅದರಲ್ಲೂ ಕೆಲವು ಸಂದರ್ಶನಗಳಲ್ಲಿ ಹೇಳದ ವಿಷಯಗಳು ಕೂಡಾ ನನ್ನ ವಿರುದ್ಧ ತಿರುಗಿ ಬೀಳುತ್ತಿವೆ. ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೊರಗಿನ ಸಂಬಂಧಗಳ ಬಗ್ಗೆ ನೆಟ್ ನಲ್ಲಿ ನನ್ನ ವಿರುದ್ಧ ಹಲವು ಕಥೆಗಳು ಹರಿದಾಡುತ್ತಿವೆ. ಯಾಕೆ ಇಷ್ಟೊಂದು ನೆಗೆಟಿವಿಟಿ? ನನ್ನ ಮೇಲೆ ದ್ವೇಷ? ನೀವು ನನ್ನ ಮೇಲೆ ತೋರುವ ಈ ದ್ವೇಷದಿಂದ ನಾನು ಗಟ್ಟಿಯಾಗುತ್ತೇನೆ ಎಂದು ನಾನು ಭಾವಿಸುವುದಿಲ್ಲ. ಅಭಿಮಾನಿಗಳು, ಪ್ರೀತಿಪಾತ್ರರ ಪ್ರೀತಿ ಮಾತ್ರವೇ ನನ್ನನ್ನು ಮುನ್ನಡೆಸುತ್ತಿದೆ.

ನಿಮ್ಮಲ್ಲಿ ಕೆಲವರು ನನಗೆ ತೋರಿದ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಅವರ ಪ್ರೀತಿ ಯಾವಾಗಲೂ ನನ್ನನ್ನು ಮುಂದಕ್ಕೆ ನಡೆಸುತ್ತದೆ. ಆ ಪ್ರೀತಿ ನನ್ನ ಮನಸ್ಸನ್ನು ಹೀಗೆ ಹೇಳುವ ಧೈರ್ಯ ನೀಡಿದೆ. ಇಲ್ಲಿಯವರೆಗೆ ನನ್ನ ಜೊತೆ ಕೆಲಸ ಮಾಡಿದವರು ನನ್ನನ್ನು ಮೆಚ್ಚಿಕೊಂಡಿದ್ದಾರೆ. ನಿಮಗಾಗಿ ನಾನು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರುವೆ, ನಿಮ್ಮನ್ನು ರಂಜಿಸಲು ಇನ್ನಷ್ಟು ಪ್ರಯತ್ನಿಸುತ್ತೇನೆ. ನಿಮ್ಮ ಸಂತೋಷ ನನಗೆ ಸಂತೋಷವನ್ನು ನೀಡುತ್ತದೆ ಧನ್ಯವಾದಗಳು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!