Monday, October 2, 2023

Latest Posts

ಐಪಿಎಲ್‌ ಎದುರಲ್ಲಿ ಹೊಸ ಫ್ಯಾಂಟಸಿ ಕ್ರಿಕೆಟ್‌ ಅಪ್ಲಿಕೇಷನ್ ಹೊರತಂದ ಅಶ್ನೀರ್‌ ಗ್ರೋವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾರ್ಕ್‌ ಟ್ಯಾಂಕ್‌ ಇಂಡಿಯಾದ ಮೂಲಕ ಫೇಮಸ್‌ ಆಗಿರುವ ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಎದುರಲ್ಲಿ ತಮ್ಮ ಹೊಸ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದಾರೆ. ‘ಕ್ರಿಕ್‌ಪೆ’ ಹೆಸರಿನ ಈ ಅಪ್ಲಿಕೇಶನ್ ಒಂದು ಫ್ಯಾಂಟಸಿ ಆಟವಾಗಿದ್ದು ಪಂದ್ಯದಲ್ಲಿ ಕ್ರಿಕೆಟಿಗರ ಆಟದ ಪ್ರದರ್ಶನವನ್ನು ಆಧರಿಸಿ ಅದರ ಅನ್ವಯ ಹಣವನ್ನು ಗೆಲ್ಲಬಹುದಾಗಿದೆ.

“ಕ್ರಿಕ್‌ ಪೇ!.. IPL ನಂತರ ಕ್ರಿಕೆಟ್‌ನಲ್ಲಿ ಅತಿದೊಡ್ಡ ಕ್ರಾಂತಿ, ಕ್ರಿಕೆಟಿಗರ ಪ್ರದರ್ಶನಕ್ಕೆ ಪಾವತಿ ಮಾಡುವ ಏಕೈಕ ಫ್ಯಾಂಟಸಿ ಆಟವಿದು, ಎಲ್ಲಿ ಕ್ರಿಕೆಟಿಗರು ಗೆಲ್ಲುತ್ತಾರೋ ಅಲ್ಲಿ ಕ್ರಿಕೆಟ್‌ ಕೂಡ ಗೆಲ್ಲುತ್ತದೆ” ಎಂದು ಅಶ್ನೀರ್‌ ಗ್ರೋವರ್‌ ಟ್ವೀಟ್ ಮಾಡಿದ್ದಾರೆ.

Apple iPhone ನ ಆಪ್ ಸ್ಟೋರ್‌ನಲ್ಲಿ ನೀಡಲಾದ ಅಪ್ಲಿಕೇಷನ್‌ ಕುರಿತಾಗಿನ ವಿವರಣೆಯಲ್ಲಿ ಕ್ರಿಕ್‌ ಪೇ ಕುರಿತು ಹೀಗೆ ಬರೆಯಲಾಗಿದೆ “Crickpe ಭಾರತದ ಅತ್ಯಂತ ವಿಶಿಷ್ಟವಾದ ಮತ್ತು ಶಕ್ತಿಯುತವಾದ ಫ್ಯಾಂಟಸಿ ಕ್ರಿಕೆಟ್ ಗೇಮಿಂಗ್ ಅಪ್ಲಿಕೇಶನ್ ಆಗಿದೆ. ಪ್ರತಿ ಪಂದ್ಯದಲ್ಲಿಯೂ ನಿಜವಾದ ಆಟಗಾರರಿಗೆ ಪಾವತಿ ಮಾಡುವ ಪ್ರಪಂಚದ ಏಕೈಕ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಇದಾಗಿದೆ. ಇದರಲ್ಲಿ ಫ್ಯಾಂಟಸಿ ಪಂದ್ಯದ ವಿಜೇತರ ಜೊತೆ ನಿಜವಾದ ಆಟದಲ್ಲಿ ಪ್ರದರ್ಶನ ಮಾಡಿದ ನಿಜವಾದ ಆಟಗಾರರು ಮತ್ತು ನೈಜ ತಂಡದ ಮಾಲೀಕರು ನಗದು ಬಹುಮಾನಗಳನ್ನು ಪಡೆಯಲಿದ್ದಾರೆ”

“ಕ್ರಿಕ್‌ಪೆ ಫ್ಯಾಂಟಸಿ ಆಟವಾಗಿದ್ದು, ಇದು ನಿಜವಾದ ಕ್ರಿಕೆಟಿಗರಿಗೆ, ಪಂದ್ಯದಲ್ಲಿ ಅವರ ನೈಜ ಪ್ರದರ್ಶನದ ಆಧಾರದ ಮೇಲೆ, ಗಳಿಸಿದ ಫ್ಯಾಂಟಸಿ ಪಾಯಿಂಟ್‌ಗಳಿಗೆ ಅನುಗುಣವಾಗಿ ಪ್ರತಿ ಆಟದ ಪಾಟ್‌ನ ಶೇಕಡಾವಾರು ಮೊತ್ತವನ್ನು ಬಹುಮಾನವಾಗಿ ನೀಡುತ್ತದೆ” ಎಂದು ಅಪ್ಲಿಕೇಶನ್ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ತಮ್ಮ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಶ್ನೀರ್‌ ಗ್ರೋವರ್‌ ಮೂರನೇ ಯುನಿಕಾರ್ನ್‌ ಸ್ಥಾಪಿಸುವುದಾಗಿ ಹೇಳಿದ್ದರು. ಅದರ ಭಾಗವಾಗಿ ತಮ್ಮ ಹೊಸ ಕಂಪನಿಯನ್ನು ಗ್ರೋವರ್‌ ಇದೀಗ ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!