ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಗ್ರಾಮ ವಾಸ್ತವ್ಯ ಹೂಡಿರುವ ಕಂದಾಯ ಸಚಿವ ಆರ್.ಅಶೋಕ್ ಅಲ್ಲಿನ ಜನರೊಂದಿಗೆ ಬೆರೆತು ಸಂಪ್ರದಾಯಿಕ ನೃತ್ಯಕ್ಕೆ ಸಚಿವರೂ ಹೆಜ್ಜೆ ಹಾಕಿದರು. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಜಾಗನಕೋಟೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಅಶೋಕ್ ಅವರು ಬೆಳಗ್ಗೆಯಿಂದ ಕೆಂಚನಹಳ್ಳಿ ಮುಂತಾದ ಗ್ರಾಮಗಳಿಗೆ ತೆರಳಿ ಜನರಿಂದ ಅಹವಾಲು ಸ್ವೀಕರಿಸಿದರು. ಸಂಜೆ ಜಾಗನಕೋಟೆ ತಲುಪಿದ ಸಚಿವರಿಗೆ ಗ್ರಮಾಸ್ಥರಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಬಳಿಕ ಜನರ ಜೊತೆಗೂಡಿ ಕೆಲಕಾಳ ಮಾತುಕತೆ ನಡೆಸಿ ಅಲ್ಲಿನ ಸಂಪ್ರದಾಯಿಕ ನೃತ್ಯ ಶುರುವಾಯಿತು. ತಾಳ-ಮೇಳ ಶಬ್ದಕ್ಕೆ ಸಚಿವರೂ ಹೆಜ್ಜೆ ಹಾಕಿದರು. ಸಚಿವ ಆರ್.ಅಶೋಕ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು. ಈ ಕುರಿತು ಸಚಿವರು ತಮ್ಮ ಟ್ವಿಟ್ಟರ್‌ನಲ್ಲಿ ಅನುಭವವನ್ನು ಹಂಚಿಕೊಂಡಿದ್ದು, ಹಳ್ಳಿ ಜನರ ಮುಗ್ದತೆಗೆ ಮಾರುಹೋದರು.
ಅದೆಂತಹ ಮುಗ್ಧತೆ, ಪ್ರೀತಿ, ಆದರ. ವರ್ಣಿಸಲು ಸಾಧ್ಯವೇ ಇಲ್ಲ. HD ಕೋಟೆಯ ಜಾಗನಕೋಟೆ ಹಾಡಿಯ ಬೆಟ್ಟ ಕುರುಬರೊಂದಿಗೆ ಕಳೆದ ಕ್ಷಣಗಳು ಯಾವಾಗಲೂ ನೆನಪಿನಲ್ಲಿರುತ್ತದೆ.#Jilladhikarinadehallikade pic.twitter.com/Pld8sIsJbV
— R. Ashoka (ಆರ್. ಅಶೋಕ) (@RAshokaBJP) November 19, 2022