ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ಕಾರಣ ಎಂದ ದರ್ಶನ್‌ ಫ್ಯಾನ್ಸ್‌, ಅಪ್ಪು ಅಭಿಮಾನಿಗಳಿಂದ ದೂರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತದೆ ಎಂದು ಕಾದು ಕುಳಿತಿದ್ದ ಬೆಂಗಳೂರು ಅಭಿಮಾನಿಗಳಿಗೆ ಮತ್ತೆ ನಿರಾಸೆ ಕಾಡಿದೆ.

ಆರ್‌ಸಿಬಿಯ ಹೊಸ ಅಧ್ಯಾಯ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರು, ಆದರೆ ಇದು ಹಳೆಯ ಅಧ್ಯಾಯಕ್ಕಿಂತ ಕೆಟ್ಟ ಪರ್ಫಾರ್ಮೆನ್ಸ್‌ ಎಂದು ಅಭಿಮಾನಿಗಳು ದೂರಿದ್ದಾರೆ.

ಇದರ ಜೊತೆಗೆ ದರ್ಶನ್‌ ಅಭಿಮಾನಿಗಳು ಆರ್‌ಸಿಬಿ ಸೋಲಿನ ಗೂಬೆಯನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೇಲೆ ಹಾಕಿದ್ದಾರೆ.

ಗಜಪಡೆ ಎನ್ನುವ ಟ್ವಿಟರ್‌ ಅಕೌಂಟ್‌ನಿಂದ ಟ್ವೀಟ್‌ ಪೋಸ್ಟ್‌ ಆಗಿದ್ದು, ಆರ್‌ಸಿಬಿ ಅನ್‌ಬಾಕ್ಸಿಂಗ್‌ ಈವೆಂಟ್‌ನಲ್ಲಿ ಅಶ್ವಿನಿ ಭಾಗಿಯಾಗಿದ್ದಕ್ಕೆ ಆರ್‌ಸಿಬಿ ಸೋತಿದೆ ಎಂದು ಹೇಳಿದ್ದಾರೆ. ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ರಮಕ್ಕೆ ಕರೆದುತಂದರೆ ಒಳ್ಳೆಯದಾಗುವುದಿಲ್ಲ. ಇದಕ್ಕೆ ಆರ್‌ಸಿಬಿ ಸೋಲೆ ಉದಾಹರಣೆ ಎಂದು ಹೇಳಿದ್ದು, ಆಕ್ಷೇಪಾರ್ಹ ಪದಬಳಕೆ ಮಾಡಿದ್ದಾರೆ. ದರ್ಶನ್‌ ಕುರಿತಾದ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿದ್ದಾರೆ.

ಇದರಿಂದಾಗಿ ಪುನೀತ್‌ ಅಭಿಮಾನಿಗಳಿಗೆ ಬೇಸತವಾಗಿದ್ದು, ದೂರು ದಾಖಲಿಸಲು ಮುಂದಾಗಿದ್ದಾರೆ. ಸದ್ಯ ಗಜಪಡೆ ಹೆಸರಿನ ಟ್ವಿಟರ್‌ ಅಕೌಂಟ್‌ನ್ನು ಡಿಲೀಟ್‌ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!