ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪುನೀತ್ ರಾಜ್‌ಕುಮಾರ್ ಅವರ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಸಿನಿಮಾ ವೀಕ್ಷಿಸಿದ್ದಾರೆ.
ಮಕ್ಕಳಾದ ಧೃತಿ ಮತ್ತು ವಂದಿತಾ ಜೊತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಸಿನಿಮಾ ನೋಡಲು ಬಂದಿದ್ದಾರೆ. ಈ ವೇಳೆ, ಅವರನ್ನು ಅಪ್ಪು ಫ್ಯಾನ್ಸ್ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
23 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಅಪ್ಪು’ ಸಿನಿಮಾಗೆ ಮತ್ತೆ ಅದೇ ಕ್ರೇಜ್ ಇರೋದು ನೋಡಿ ಅಶ್ವಿನಿ ಖುಷಿಪಟ್ಟಿದ್ದಾರೆ. ಬೆಳ್ಳಿಪರದೆಯ ಮೇಲೆ ಪುನೀತ್ ಅವರನ್ನು ನೋಡ್ತಿದ್ದಂತೆ ಅಶ್ವಿನಿ ಮತ್ತು ಮಕ್ಕಳಾದ ಧೃತಿ, ವಂದಿತಾ ಭಾವುಕರಾಗಿದ್ದಾರೆ. ಬಳಿಕ 10 ನಿಮಿಷಗಳ ಕಾಲ ಸಿನಿಮಾ ನೋಡಿ ತೆರಳಿದ್ದಾರೆ.