ಏಷ್ಯಾಕಪ್‌ ಟೂರ್ನಿ ಆರಂಭದಲ್ಲೇ ದೊಡ್ಡ ವಿವಾದ..!

ಹೊಸಗಂತ ಡಿಜಿಟಲ್‌ ಡೆಸ್ಕ್‌
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಏಷ್ಯಾ ಕಪ್ ಕದನ ಆರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಆದರೆ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲೇ ದೊಡ್ಡ ವಿವಾದವೊಂದು ಉದ್ಭವಿಸಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ತಾನವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್‌ನ ಮೊದಲ ಓವರ್‌ನ ಐದು ಮತ್ತು ಆರನೇ ಎಸೆತಗಳಲ್ಲಿ ಎಡಗೈ ವೇಗದ ಬೌಲರ್ ಫಜ್ಲ್ಹಾಕ್ ಫಾರೂಕಿ ಸತತ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ ಗೆ ಅಟ್ಟುವ ಮೂಲಕ ಶ್ರೀಲಂಕಾಗೆ ಅಘಾತ ನೀಡಿದರು.
ಎರಡನೇ ಓವರ್‌ ನಲ್ಲಿ ಲಂಕಾಗೆ ಮತ್ತೊಂದು ಶಾಕ್‌ ಕಾದಿತ್ತು. ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಪಾಥುಮ್ ನಿಸಂಕಾ ಓವರ್‌ನ ಕೊನೆಯ ಎಸೆತವನ್ನು ಕವರ್‌ ಕ್ಷೇತ್ರದತ್ತ ಆಡಲು ಪ್ರಯತ್ನಿಸಿದರು. ಆದರೆ ಅವರನ್ನು ವಂಚಿಸಿದ ಬಾಲ್ ವಿಕೆಟ್ ಕೀಪರ್ ಅತ್ತ ಸಾಗಿತು.  ಈ ವೇಳೆ ಅಫ್ಘಾನಿಸ್ತಾನ ತಂಡ ಔಟ್‌ ಗಾಗಿ ಬಲವಾದ ಮನವಿಯನ್ನು ಮಾಡಿತು. ಆದರೆ ಅಂಪೈರ್ ಪುರಸ್ಕರಿಸಲಿಲ್ಲ. ನಂತರ ಅಫ್ಘಾನಿಸ್ತಾನ ಡಿಆರ್‌ಎಸ್ ತೆಗೆದುಕೊಂಡಿತು. ಆ ವೇಳೆ ಥರ್ಡ್ ಅಂಪೈರ್ ನೀಡಿದ ನಿರ್ಧಾರ ಎಲ್ಲರನ್ನೂ ಅಚ್ಚರಿಗೀಡು ಮಾಡಿತು. ಹಲವಾರು ಬಾರಿ ವಿಮರ್ಶೆಯನ್ನು ವೀಕ್ಷಿಸಿದ ಮೂರನೇ ಅಂಪೈರ್,  ನಂತರ ಸ್ನಿಕೋಮೀಟರ್‌ನ ಸಹಾಯವನ್ನು ಪಡೆದರು. ಆದರೆ ಸ್ನಿಕೋಮೀಟರ್‌ನಲ್ಲಿ ಚೆಂಡು ಬ್ಯಾಟ್‌ಗೆ ಬಡಿದ ಯಾವುದೇ ಸೂಚನೆ ಇರಲಿಲ್ಲ.

ಆದರೆ ಚೆಂಡು ಬ್ಯಾಟ್ ಮೂಲಕ ಹಾದು ಹೋದಂತೆ ಸ್ನಿಕೋಮೀಟರ್‌ನಲ್ಲಿ ಚಲನೆ ಕಡಿಮೆಯಾಗಿತ್ತು. ಇದನ್ನು ನೋಡಿದವರೆಲ್ಲರೂ ಇದು ನಾಟ್ ಔಟ್ ಎಂದು ಭಾವಿಸಿದ್ದರು. ಆದರೆ ಥರ್ಡ್ ಅಂಪೈರ್ ಜಯರಾಮನ್ ಮದನಗೋಪಾಲ್ ಅದನ್ನು ಔಟ್ ಎಂದು ನೀಡಿ ಎಲ್ಲರನ್ನೂ ಕಕ್ಕಾಬಿಕ್ಕಿ ಯಾಗಿಸಿದ್ದಾರೆ. ಮೈದಾನದಲ್ಲಿ ಇದನ್ನು ನೋಡಿದವರೆಲ್ಲರೂ ಬೆಚ್ಚಿಬಿದ್ದರು.

ಅಫ್ಘಾನಿಸ್ತಾನ ಆಟಗಾರರು ಮತ್ತು ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು. ಆದರೆ ಇತ್ತ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಿದ್ದ ಶ್ರೀಲಂಕಾ ಕೋಚ್ ಕ್ರಿಸ್ ಸಿಲ್ವರ್ ವುಡ್ ಹಾಗೂ ನಾಯಕ ದಸುನ್ ಶನಕಾ ಕುಳಿತು ಕೋಪಗೊಂಡಿದ್ದು ಕಾಣುತ್ತಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!