ಪಾಕ್ ಸೇನೆಯಿಂದ ಸಿಧು ಮೂಸೇವಾಲಾ ಹಾಡು: ಗಡಿಯಲ್ಲಿ ಡ್ಯಾನ್ಸ್ ಮಾಡಿದ ಭಾರತೀಯ ಯೋಧ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ನಿಧನರಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಇತ್ತೀಚೆಗಷ್ಟೇ ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಕೂಡ ಸಿಧು ಹಾಡುಗಳನ್ನು ಪ್ಲೇ ಮಾಡಿದೆ.

ಈ ವೇಳೆ ಗಡಿಯಲ್ಲಿದ್ದ ನಮ್ಮ ಸೈನಿಕರು ಖುಷಿಯಿಂದ ಕುಣಿದಾಡಿದ್ದಾರೆ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಗಡಿಭಾಗದಲ್ಲಿರುವ ಪಾಕಿಸ್ತಾನದ ಭೂಪ್ರದೇಶದಲ್ಲಿ ಸೇನೆಯ ಧ್ವಜಾರೋಹಣ ಮಾಡುವಾಗ ಸಿಧು ಅವರ ‘ಬಂಬಿಹ ಬೋಲೆ’ ಹಾಡು ಧ್ವನಿವರ್ಧಕದಲ್ಲಿ ಮೂಡಿಬಂದಿದೆ. ಈ ಕಡೆ ದೂರದಲ್ಲಿದ್ದ ಭಾರತೀಯ ಸೈನಿಕರಿಗೂ ಆ ಹಾಡು ಕೇಳಿಸಿದೆ. ಪಾಕ್ ಸೇನೆ ಭಾರತೀಯ ಸಿದ್ದು ಹಾಡನ್ನು ಹಾಕುತ್ತಿದ್ದಂತೆ, ನಮ್ಮ ದೇಶದ ಗಾಯಕ ಹಾಡಿರುವ ಹಾಡೆಂದು ನಮ್ಮ ಸೈನಿಕರು ಸಂತಸದಿಂದ ಕುಣಿದಾಡಿದರು.

ಅಲ್ಲಿದ್ದ ಕೆಲ ಸೈನಿಕರು ವಿಡಿಯೋ ತೆಗೆದಿದ್ದಾರೆ. ಈ ವಿಡಿಯೋವನ್ನು ಧಲಿವಾಲ್ ಎಂಬ ಐಪಿಎಸ್ ಅಧಿಕಾರಿ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!