ಏಷ್ಯಾ ಕಪ್​: ಕಮರಿದ ಭಾರತ ಹಾಕಿ ತಂಡದ ಫೈನಲ್ ಕನಸು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏಷ್ಯಾ ಕಪ್​ನ ಸೂಪರ್-4 ರ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ದ ಭಾರತ ಹಾಕಿ ತಂಡ ಡ್ರಾ ಮಾಡಿಕೊಳ್ಳುವ ಮೂಲಕ ಫೈನಲ್​ ಪ್ರವೇಶದ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.
ನಿರ್ಣಾಯಕ ಪಂದ್ಯದಲ್ಲಿ ಭಾರತ 4-4 ಅಂತರದಿಂದ ದಕ್ಷಿಣ ಕೊರಿಯಾ ಸಮಬಲ ಸಾಧಿಸಿತು. ಈ ಮೂಲಕ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಉತ್ತಮ ಗೋಲು ಸರಾಸರಿಯಿಂದಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಪಂದ್ಯದ 9ನೇ ನಿಮಿಷದಲ್ಲಿ ನೀಲಂ ಸಂಜೀಪ್ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದರ ನಂತರ ಕೊರಿಯಾ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ.
ಆದರೆ 28ನೇ ನಿಮಿಷದಲ್ಲಿ ಕೊರಿಯಾದ ಕಿಮ್ ಜಂಗ್ ಹೂ ಗೋಲು ಬಾರಿಸಿ ಮತ್ತೆ ಪಂದ್ಯವನ್ನು 3-3 ರಿಂದ ಸಮಬಲಕ್ಕೆ ತಂದರು. ಉಭಯ ತಂಡಗಳ ಭರ್ಜರಿ ಪೈಪೋಟಿಯೊಂದಿಗೆ ಮೂರನೇ ಕ್ವಾರ್ಟರ್​ ಮತ್ತಷ್ಟು ರೋಚಕತೆ ಪಡೆಯಿತು.
44ನೇ ನಿಮಿಷದಲ್ಲಿ ಜಂಗ್ ಮಂಜೆ ಮತ್ತೊಮ್ಮೆ ಗೋಲು ಬಾರಿಸಿ 4-4 ರಲ್ಲಿ ಸಮಬಲ ಸಾಧಿಸಿದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತ ತಂಡವು ಫೈನಲ್​ಗೇರುವ ಕನಸು ಕೂಡ ಕಮರಿತು. ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಪರಿಣಾಮ ಗೋಲುಗಳ ಸರಾಸರಿಯಲ್ಲಿ ಮಲೇಷ್ಯಾ ತಂಡವು ಫೈನಲ್​ಗೆ ಪ್ರವೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!