ದಿನಭವಿಷ್ಯ | ಇಂದು ನಿಮ್ಮ ತಾಳ್ಮೆ ಪರೀಕ್ಷಿಸುವ ಪ್ರಸಂಗ ಉದ್ಭವಿಸಲಿದೆ

ಮೇಷ
ಉದ್ಯೋಗ ಸಂಬಂಧ ಪ್ರಯಾಣ. ಆದರೆ ಅದು ನಿಮಗೆ ಹಿತಕರವೆನಿಸದು. ವೃತ್ತಿಯಲ್ಲಿ ಹೊಸ ಅವಕಾಶ ಲಭ್ಯ. ಕೌಟುಂಬಿಕ ನೆಮ್ಮದಿ.

ವೃಷಭ
ಆಪ್ತರಿಂದ ಆರ್ಥಿಕ
ನೆರವು ಪಡೆಯುವ ಸಂಭವ. ಉದ್ಯೋಗ ದಲ್ಲಿ  ಎಲ್ಲವೂ ಸುಗಮ. ಉಳಿತಾಯಕ್ಕೆ ಆದ್ಯತೆ ಕೊಡಿ. ಖರ್ಚು ಗಳನ್ನು ನಿಯಂತ್ರಿಸಿ.

ಮಿಥುನ
ಇಂದು ಹೆಚ್ಚು ತಾಳ್ಮೆಯಿಂದ ವರ್ತಿಸಬೇಕು. ಮನೆ ಮತ್ತು ಕೆಲಸದ ಜಾಗದಲ್ಲಿ ಅಪ್ರಿಯ ಬೆಳವಣಿಗೆಗೆ ಸಾಕ್ಷಿಯಾಗುವಿರಿ.

ಕಟಕ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಹೊಣೆಗಾರಿಕೆಯೂ ಹೆಚ್ಚು. ಖರ್ಚುಗಳು ಅಧಿಕ. ಒಟ್ಟಾರೆಯಾಗಿ ದಿನವಿಡೀ ಒತ್ತಡದ ಬದುಕು.

ಸಿಂಹ
ಕೌಟುಂಬಿಕ ವಿಷಯ ವೊಂದು ನಿಮ್ಮನ್ನು ಭಾವುಕಗೊಳಿಸುತ್ತದೆ. ಮನೋನಿಗ್ರಹ ಅವಶ್ಯ. ಆರೋಗ್ಯಕ್ಕೆ ಸಂಬಂಸಿ ಖರ್ಚು ಹೆಚ್ಚಾಗಬಹುದು.

ಕನ್ಯಾ
ಆರ್ಥಿಕವಾಗಿ ಸುದಿನ. ಧನಲಾಭ. ಉಳಿತಾಯ ಹೆಚ್ಚು. ಉದ್ಯಮದಲ್ಲಿ ಯಶಸ್ಸು. ಕೌಟುಂಬಿಕ ಸವಾಲು ಸಮರ್ಥವಾಗಿ ಎದುರಿಸುವಿರಿ. ಸಹಕಾರ ವೃದ್ಧಿ.

ತುಲಾ
ದಿನದ ಆರಂಭದಲ್ಲಿ ಕೆಲವು ಕಷ್ಟಗಳನ್ನು ಎದುರಿಸುವಿರಿ. ಬಳಿಕ ಎಲ್ಲವೂ ಸುಗಮ. ದಿನದಂತ್ಯಕ್ಕೆ ತೃಪ್ತಿಕರ ಭಾವ. ಮಾನಸಿಕ ನಿರಾಳತೆ.

ವೃಶ್ಚಿಕ
ವಿಶೇಷಗಳಿಲ್ಲದ ದಿನ. ಏಕತಾನತೆಯ ಕೆಲಸ. ಕೌಟುಂಬಿಕ ಒತ್ತಡ ಕಡಿಮೆ. ಕಾಲುನೋವು ಬಾಸಬಹುದು. ಧ್ಯಾನ ಸಹಕಾರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.

ಧನು
ಬುದ್ಧಿಮತ್ತೆಯಿಂದ ಕಾರ್‍ಯ ನಡೆಸಬೇಕು. ಇಲ್ಲವಾದರೆ ಸೂಕ್ತ ಫಲ ದೊರಕದು. ನಿಮ್ಮ ತಾಳ್ಮೆ ಪರೀಕ್ಷಿಸುವ ಪ್ರಸಂಗ ಉದ್ಭವಿಸುತ್ತದೆ. ಕೌಟುಂಬಿಕ ಭಿನ್ನಮತ.

ಮಕರ
ಇಂದಿನ ದಿನ ನಿಮಗೆ ಪೂರಕ. ಯಾವುದೇ ಕಾರ್‍ಯ ಉತ್ತಮ ಫಲ ನೀಡುವುದು. ಕೌಟುಂಬಿಕ ಸೌಹಾರ್ದ ವೃದ್ಧಿ. ಮಿತ ಆಹಾರ ಆರೋಗ್ಯಕ್ಕೆ ಒಳಿತು.

ಕುಂಭ
ವೃತ್ತಿಯಲ್ಲಿ ತೊಡಕು. ಉದ್ಯೋಗಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಬೇಡಿ. ಅನಿರೀಕ್ಷಿತ ಖರ್ಚು ಮನಶ್ಶಾಂತಿ ಕೆಡಿಸುತ್ತದೆ. ಖರ್ಚು ನಿಯಂತ್ರಿಸಿ.

ಮೀನ
ಇತರರ ತಪ್ಪು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದನ್ನು ಸರಿಪಡಿಸಬೇಕಾದ ಹೊಣೆ ನಿಮ್ಮ ಮೇಲೆ ಬೀಳುತ್ತದೆ. ಕೌಟುಂಬಿಕ ಹೊಂದಾಣಿಕೆ ಕೊರತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!