ಏಷ್ಯಾ ಕಪ್​ ಫೈನಲ್​: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಾಕಿಸ್ತಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

15ನೇ ಆವೃತ್ತಿಯ ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಪ್ರಶಸ್ತಿಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಣಸಾಡುತ್ತಿವೆ. ಟಾಸ್​ ಗೆದ್ದಿರುವ ಪಾಕಿಸ್ತಾನ ಬೌಲಿಂಗ್​ ಆಯ್ದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಈವರೆಗೂ ಎರಡನೇ ಅವಧಿ ಬ್ಯಾಟ್​ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ಬೌಲಿಂಗ್​ ಆಯ್ಕೆ ಮಾಡಿದೆ.
ಶ್ರೀಲಂಕಾ 6 ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, 10 ವರ್ಷಗಳ ಬಳಿಕ ಪಾಕಿಸ್ತಾನ 3 ನೇ ಪ್ರಶಸ್ತಿ ಗೆಲ್ಲಲು ಕಣಕ್ಕಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!