ಏಷ್ಯಾಕಪ್ ಹೈವೋಲ್ಟೇಜ್ ಪಂದ್ಯ: ಪಾಕ್ ಬ್ಯಾಟಿಂಗ್ ಗೆ ಮತ್ತೆ ವರುಣ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಭಾರತ ಬ್ಯಾಟಿಂಗ್ ವೇಳೆ ಮಳೆ ವಕ್ಕರಿಸಿದ ಕಾರಣ ಕೆಲ ಕಾಲ ಪಂದ್ಯ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪಂದ್ಯ ಆರಂಭಗೊಂಡಿತ್ತು. ಭಾರತ 267 ರನ್ ಟಾರ್ಗೆಟ್ ಚೇಸ್ ಮಾಡಲು ನೀಡಿತ್ತು.

ಇದೀಗ ಮತ್ತೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಾಕಿಸ್ತಾನ ಇನ್ನಿಂಗ್ಸ್ ವಿಳಂಬವಾಗಲಿದೆ.

ಸದ್ಯ ಮಳೆ ಜೋರಾಗಿ ಸುರಿಯುತ್ತಿದೆ. ಪಿಚ್ ಹಾಗೂ ಮೈದಾನವನ್ನು ಕವರ್ ಹಾಕಿ ಮುಚ್ಚಲಾಗಿದೆ. ಆದರೆ 30 ರಿಂದ 35 ರನ್ ಕಡಿಮೆಯಾಗಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಕಾರಣ ಮಳೆಯಿಂದ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯಿಸಿದರೆ ಓವರ್ ಕಡಿತಗೊಳ್ಳಲಿದೆ. ಟಾರ್ಗೆಟ್ ಪರಿಷ್ಕರಣೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!