ವಿವಾಹ ವ್ಯವಸ್ಥೆ ನಾಶದ ವ್ಯವಸ್ಥಿತ ಸಂಚೇ ಲಿವ್-ಇನ್ ಸಂಬಂಧ: ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮದುವೆ ಬಂಧವು ಖಾತ್ರಿ ಪಡಿಸುವ ಭದ್ರತೆ ಮತ್ತು ಸ್ಥಿರತೆಯನ್ನು ಲಿವ್-ಇನ್ ಸಂಬಂಧದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿರುವ ಅಲಹಾಬಾದ್ ಹೈಕೋರ್ಟ್, ಲಿವ್-ಇನ್ ಎಂಬುದು ಮದುವೆಯಂತಹ ಅತ್ಯುನ್ನತ ಬಾಂಧವ್ಯವನ್ನು ನಾಶಗೊಳಿಸುವ ವ್ಯವಸ್ಥಿತ ಸಂಚು ಎಂದು ಕಳವಳದಿಂದ ಹೇಳಿತು.

ಉತ್ತರಪ್ರದೇಶದ ಶಹರಾನ್‌ಪುರದ ಯುವಕನೊಬ್ಬ ಯುವತಿಯೊಬ್ಬಳ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದು, ಅನಂತರ ಅತ್ಯಾಚಾರವೆಸಗಿದ ಆರೋಪವನ್ನು ಎದುರಿಸುತ್ತಿದ್ದ. ಈತನಿಗೆ ನ್ಯಾಯಾಲಯ ಜಾಮೀನು ನೀಡಿತಾದರೂ, ಮದುವೆಯಂತಹ ಒಂದು ವ್ಯವಸ್ಥೆಯನ್ನು ನಾಶಗೊಳಿಸಲು ಭಾರತದಲ್ಲಿ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಪ್ರತಿ ಋತುವಿಗೆ ಸಂಗಾತಿಗಳನ್ನು ಬದಲಿಸುವಂತಹ ಕಲ್ಪನೆ ಅದೊಂದು ಕ್ರೂರ ಕಲ್ಪನೆ. ಲಿವ್-ಇನ್ ಸಂಬಂಧವನ್ನು ಒಂದು ಆರೋಗ್ಯಕರ ಸಮಾಜ ಮತ್ತು ಸುಸ್ಥಿರ ಸಮಾಜದ ಹೆಗ್ಗುರುತು ಎಂದು ಪರಿಗಣಿಸಲಾಗದು ಎಂಬುದಾಗಿ ನ್ಯಾಯಾಶ ನ್ಯಾ.ಸಿದ್ಧಾರ್ಥ್ ಅವರು ಎಚ್ಚರಿಸಿದರು.

ಶಹರಾನ್‌ಪುರದ ಯುವಕ ೧೯ವರ್ಷದ ಯುವತಿ ಜೊತೆ ಲಿವ್-ಇನ್ ಹೆಸರಿನಲ್ಲಿ ಇದ್ದು,ಆ ಬಳಿಕ ಯುವತಿ ಆತನ ವಿರುದ್ಧ ದಿಯೋಬಂದ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾಗಿ ದೂರಿದ್ದಳು. ಅಲ್ಲದೆ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿಯೂ ಆರೋಪಿಸಿದ್ದಳು.ಈ ವಂಚಕನನ್ನು ಏ.೧೮ರಂದು ಬಂಧಿಸಲಾಗಿತ್ತು.

ತಥಾಕಥಿತ ಮುಂದುವರಿದ ದೇಶಗಳ ವಿಕೃತಿ ಭಾರತಕ್ಕೂ ಕಾಲಿಟ್ಟಿದೆ. ಈ ದೇಶದಲ್ಲಿ ಮದುವೆಯಂತಹ ವ್ಯವಸ್ಥೆ ಸಂಪೂರ್ಣವಾಗಿ ಇಲ್ಲವಾದ ಬಳಿಕವೇ , ಇತರ ಕೆಲವು ತಥಾಕಥಿತ ಮುಂದುವರಿದ ದೇಶಗಳಲ್ಲಿ ಇರುವಂತಹ ಲಿವ್-ಇನ್ ಸಂಬಂಧವನ್ನು ಇಲ್ಲೂ ಸಹಜವೆಂದು ಪರಿಗಣಿಸಲು ಸಾಧ್ಯ.ಆ ದೇಶಗಳಲ್ಲಿ ಮದುವೆಯಂತಹ ವ್ಯವಸ್ಥೆ ಅವರಿಗೆ ಒಂದು ‘ಸಮಸ್ಯೆ’ಯಾದ ಬಳಿಕ ಇಂತಹ ಒಂದು ಲಿವ್-ಇನ್ ಸಂಬಂಧ ಬೆಳೆದುಬಂದಿರುವುದನ್ನು ನ್ಯಾಯಾಲಯ ಬೊಟ್ಟು ಮಾಡಿತು.

ಇಂತಹ ಲಿವ್-ಇನ್ ಸಂಬಂಧ ಇಂದು ಪಾಶ್ಚಾತ್ಯ ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಸಾಮಾಜಿಕ ಅಸಮತೋಲನ, ಅಶಾಂತಿ, ಹಿಂಸೆ, ಅರಾಜಕತೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಅಲ್ಲಿನ ಚಿಂತಕರು, ಪ್ರಜ್ಞಾವಂತರು ಭಾರತದ ವಿವಾಹದಂತಹ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಿರುವುದಿಲ್ಲಿ ಉಲ್ಲೇಖನೀಯ.

ಭವಿಷ್ಯದ ಘೋರ ಪರಿಣಾಮ ಬಗ್ಗೆ ಯುವವರ್ಗಕ್ಕೆ ಅರಿವಿಲ್ಲ 
ಆದರೆ ಇಂತಹುದೇ ಪ್ರವೃತ್ತಿ ಈಗ ಭಾರತದಲ್ಲೂ ಬೆಳೆಯುತ್ತಿರುವುದು ಕಳವಳಕಾರಿ .ಇಂತಹ ಲಿವ್-ಇನ್ ಸಂಬಂಧ ಪ್ರಗತಿಯ ಸಂಕೇತ ಎಂದು ಬಿಂಬಿಸಲಾಗುತ್ತಿದೆ.ಯುವವರ್ಗ ಇಂತಹ ವಾದಕ್ಕೆ ಬಲಿಬೀಳುತ್ತಿದ್ದು, ಈ ವರ್ಗ ಇದರ ದೂರಗಾಮಿ ಗಂಡಾಂತರಗಳ ಬಗ್ಗೆ ಅರಿವನ್ನೇ ಹೊಂದಿಲ್ಲ.ಇದು ಮುಂದೊಂದು ದಿನ ನಮಗೆ ಅತ್ಯಂತ ಘೋರ ಸಮಸ್ಯೆಯಾಗಿ ಕಾಡೀತು ಎಂದು ನ್ಯಾಯಾಶರು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!