ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಆತಿಥ್ಯ ವಹಿಸುವ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದ್ದು, . ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ತಿಳಿಸಿವೆ.
ಇದರ ನಂತರ, ಪಾಕಿಸ್ತಾನವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಹೊಸ ಪ್ರಸ್ತಾಪ ನೀಡಿದ್ದು, ಈ ಪಂದ್ಯಾವಳಿಯ ಕನಿಷ್ಠ ಮೊದಲ 4 ಪಂದ್ಯಗಳನ್ನ ಆಯೋಜಿಸಲು ಅವಕಾಶ ನೀಡಬೇಕು ಎಂದು ಬೆದರಿಕೆ ಹಾಕಿದೆ. ಇಲ್ಲದಿದ್ದರೆ, ಅವರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಮತ್ತು ಅದರೊಂದಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಹ ತೊರೆಯುವುದಾಗಿ ಬೆದರಿಕೆ ಹಾಕಿದೆ.
ಏಷ್ಯಾಕಪ್ ಈ ಬಾರಿ 50 ಓವ್ರರ್ ಗಳ ಮಾದರಿಯಲ್ಲಿ ನಡೆಯಲಿದ್ದು, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಮುಂಚಿತವಾಗಿ ಈ ಪಂದ್ಯಾವಳಿ ನಡೆಯಲಿದೆ.