ಹೊಸದಿಗಂತ ವರದಿ, ಮುಂಡಗೋಡ:
ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ೪*೧೦೦ ರಿಲೇ ಯಲ್ಲಿ ಮಹಿಳಾ ತಂಡ ಕಂಚಿನ ಪದಕ ಪಡೆದಿದ್ದು, ೨೦೦ ಮೀಟರ್ ಓಟದ ಪೈನಲ್ ಸುತ್ತಿಗೆ ಕರ್ನಾಟಕ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ನಯನಾ ಅರ್ಹತೆ ಪಡೆದಿದ್ದಾಳೆ.
ದಕ್ಷಿಣ ಕೊರಿಯಾದಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಭಾರತದ ಪ್ರತಿನಿಧಿಯಾಗಿ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ೪*೧೦೦ ರಿಲೇಯ ಮಹಿಳಾ ತಂಡದಲ್ಲಿ ತಾಲೂಕಿನ ನಯನಾ ಕೊಕರೆ ಪ್ರತಿನಿಧಿಸಿದ್ದಳು. ಮಂಗಳವಾರ ರಿಲೇಯಲ್ಲಿ ಮಹಿಳಾ ತಂಡ ಕಂಚಿನ ಪದಕ ಪಡೆದಿದೆ. ೨೦೦ ಮೀಟರ ಓಟದಲ್ಲಿ ಪೈನಲ್ ಸುತ್ತಿಗೆ ಭಾರತದಿಂದ ಇಬ್ಬರ ಅರ್ಹತೆ ಪಡೆದಿದ್ದಾರೆ. ತಾಲೂಕಿನ ನಯನಾ ಕೊಕರೆ ಬುಧವಾರ ೨೦೦ ಮೀಟರ್ ಪೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾಳೆ. ಅಥ್ಲೆಟಿಕ್ ಕ್ಷೇತ್ರದಲ್ಲಿ ಗೌಳಿ ಕುಟುಂಬದ ನಯನಾ ಕೊಕರೆ ಉತ್ತಮ ಸಾಧನೆ ಮಾಡುತ್ತಿದ್ದು ನಾಳೆ ನಡೆಯುವ ಪೈನಲ್ ಸುತ್ತಿನಲ್ಲಿ ಗೆದ್ದು ಬಂಗಾರದ ಪದಕ ಪಡೆಯುವತ್ತಾಗಲಿ ಎಂದು ತಾಲೂಕಿನ ಜನತೆ ಶುಭ ಹಾರೈಸಿದ್ದಾರೆ.