ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ವೈದಿಕರಾಗಿದ್ದ ದಿ.ಶಿಬರೂರು ಹಯಗ್ರೀವ ತಂತ್ರಿಗಳ ಪತ್ನಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಪೂರ್ವಾಶ್ರಮದ ತಾಯಿ ಕಸ್ತೂರಿಯಮ್ಮ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವರು ಕಟೀಲು ಸೇರಿದಂತೆ ವಿವಿಧ ದೇಗುಲಗಳ ತಂತ್ರಿಗಳಾಗಿರುವ ನಿವೃತ್ತ ಉಪನ್ಯಾಸಕ ವೇದವ್ಯಾಸ ತಂತ್ರಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಶಿಬರೂರು ಮಠ ಹಯಗ್ರೀವ ತಂತ್ರಿಗಳು ತನ್ನ ಮನೆಯಲ್ಲೇ ನೂರಾರು ವೈದಿಕರಿಗೆ ಗುರುಗಳಾಗಿ ಪಾಠ ಮಾಡಿದ್ದರು. ಕಸ್ತೂರಿಯಮ್ಮ ತಂತ್ರಿಗಳ ಶಿಷ್ಯರನ್ನು ಊಟ ಉಪಾಹಾರವಿತ್ತು ಸಲಹಿದ್ದರು.