ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿ: ಗೆದ್ದು ಸೆಮಿ ಪೈನಲ್ ಪ್ರವೇಶಿದ ಮನಿಕಾ ಬಾತ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮನಿಕಾ ಬಾತ್ರಾ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದ್ದಾರೆ.ಈ ಮೂಲಕ ಸೆಮಿ ಪೈನಲ್ ಪ್ರವೇಶಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಚೀನಾ ತೈಪೆಯ ಚೆನ್ ಸ್ಜು-ಯು ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದರು .
ಮಣಿಕಾ ಚೆನ್ ಅವರನ್ನು 6-11 11-6 11-5 11-7 8-11 9-11 11-9 ಕಠಿಣ ಹೋರಾಟದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿದರು.ಈ ಹಿಂದೆ ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಏಸ್ ವಿಶ್ವದ ನಂ.7ನೇ ಶ್ರೇಯಾಂಕದ ಚೀನಾದ ಚೆನ್ ಕ್ಸಿಂಗ್‌ಟಾಂಗ್‌ಗೆ ಆಘಾತ ನೀಡಿದ್ದರು.
ಸೆಮಿಫೈನಲ್‌ನಲ್ಲಿ ಮಣಿಕಾ ಅವರು ಕೊರಿಯಾದ ಜಿಯೋನ್ ಜಿಹೀ ಮತ್ತು ಜಪಾನ್‌ನ ಮಿಮಾ ಇಟೊ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!