ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಟಿಟಿಎಫ್-ಎಟಿಟಿಯು ಏಷ್ಯನ್ ಕಪ್ ಪಂದ್ಯಾವಳಿಯಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಬಾತ್ರಾ 11-6, 6-11, 11-7, 12-10, 4-11, 11-2 ಸೆಟ್ ಗಳಿಂದ ಎದುರಾಳಿಯನ್ನು ಮಣಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಿಮಾ ಇಟೊ ವಿರುದ್ಧ 2-4 (8-11, 11-7, 7-11, 6-11, 11-8, 7-11) ಸೆಟ್ ಗಳಿಂದ ಸೋಲನುಭವಿಸಿದ್ದರು. ಬಳಿಕ ಅವರು ಕಂಚಿನ ಪದಕಗಾಗಿ ನಡೆದ ಪಂದ್ಯದಲ್ಲಿ ಬಹುಮಾನವನ್ನು ಗೆದ್ದರು.