ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿದಿದೆ. ಈ ನಡುವೆ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ವಿತ್ಯಾ ರಾಮರಾಜ್ ಮಹತ್ತರ ಸಾಧನೆ ಮಾಡಿದ್ದಾರೆ. ಅವರು ಮಾಜಿ ಓಟಗಾರ್ತಿ ಪಿ.ಟಿ ಉಷಾ ಅವರ 39 ವರ್ಷಗಳ ರಾಷ್ಟ್ರೀಯ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.
ಸೋಮವಾರ ನಡೆದ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ, 25 ವರ್ಷದ ವಿತ್ಯಾ 55.42 ಸೆಕೆಂಡ್‌ಗಳಲ್ಲಿ ಅತ್ಯುತ್ತಮ ಸಮಯದೊಂದಿಗೆ ಎರಡನೇ ಸ್ಥಾನಗಳಿಸಿ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ಫೈನಲ್ ನಡೆಯಲಿದೆ. ಉಳಿದಂತೆ ಜೆಸ್ಸಿ ಸಂದೇಶ್, ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್, ಮತ್ತು ಕೃಷ್ಣನ್ ಕುಮಾರ್ ಸೇರಿ ಹಲವು ಅಥ್ಲೀಟ್‌ಗಳು ತಮ್ಮ ಈವೆಂಟ್‌ಗಳಲ್ಲಿ ಗೆದ್ದು ಫೈನಲ್ಗೆ ಪ್ರವೇಶಿಸಿದ್ದಾರೆ.