ಹೊಸದಿಗಂತ ವರದಿ ಕಲಬುರಗಿ:
ಕಾಂಗ್ರೆಸ್ ಜೊತೆಗೆ ಇನ್ನಿತರ ಪಕ್ಷಗಳು ಸೇರಿಕೊಂಡು ಮಾಡಿಕೊಂಡಿರುವ ಒಕ್ಕೂಟವು ಇಂಡಿಯಾ ಒಕ್ಕೂಟವಲ್ಲ.ಇದು ಘಮಂಡಿಯಾ ಘಟಬಂಧನ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಮಂಡಿಯಾ ಘಟಬಂಧನ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಸ್ಟಾಲಿನ್ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಎಲ್ಲೆಡೆಯೂ ಬೆಂಕಿ ಹತ್ತಿದೆ. ಈ ರೀತಿ ಅವಹೇಳನಕಾರಿ ಮಾತಾಡುವವರಿಗೆ ನಾಚಿಕೆ ಆಗಬೇಕು ಎಂದರು.
ಕಾಂಗ್ರೆಸ್ ಪಕ್ಷದ ಯಾವುದೇ ಕೆಲಸಗಳು ಆಗುತ್ತಿಲ್ಲ. ಮೋದಿ ಅವರನ್ನು ಅಧಿಕಾರದಿಂದ ಸರಿಸಬೇಕು ಎಂಬುದೇ ಇಂಡಿಯಾ ಒಕ್ಕೂಟದ ಮುಖ್ಯ ಅಜೆಂಡಾ ಆಗಿದೆ. ಸನಾತನ ಧರ್ಮದ ಬಗ್ಗೆ ಎಷ್ಟೇ ಮಾತನಾಡಿದರೂ, ಅದನ್ನು ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ. ಮತ್ತೆ ಪುಟಿದು ಮೇಲೆಳಲಿದೆ ಎಂದರು.