ಹೊಸ ದಿಗಂತ ಡಿಜಿಟಲ್ ಡೆಸ್ಕ್:
2023ರ ಏಷ್ಯನ್ ಗೇಮ್ಸ್’ನ ಮಹಿಳಾ ಶಾಟ್ ಪುಟ್ ಸ್ಪರ್ಧೆಯಲ್ಲಿ ಕಿರಣ್ ಬಲಿಯಾನ್ ಕಂಚಿನ ಪದಕ ಗೆದ್ದಿದ್ದಾರೆ. ಕಿರಣ್ 17.36 ಮೀಟರ್ ಎಸೆದು ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಪದಕ ತಂದುಕೊಟ್ಟರು. ಭಾರತದ ಮತ್ತೊಬ್ಬ ಸ್ಪರ್ಧಿ ಮನ್ ಪ್ರೀತ್ ಕೌರ್ ಐದನೇ ಸ್ಥಾನ ಪಡೆದರು.
ಗಾಂಗ್ ಲಿಜಿಯಾವೊ 19.58 ಮೀಟರ್ ದೂರ ಎಸೆದು ಚಿನ್ನ ಗೆದ್ದರೆ, ಸಾಂಗ್ ಜಿಯಾಯುವಾನ್ 18.92 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು.
ಶಾಟ್ ಪುಟ್ ನಲ್ಲಿ ಕಿರಣ್ ಬಲಿಯಾನ್ ಅವರ ಗೆಲುವು 1951ರಲ್ಲಿ ಬಾರ್ಬರಾ ವೆಬ್ ಸ್ಟರ್ ಅವರ ಗೆಲುವಿನ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯು ಎರಡು ಪದಕಗಳ ನಡುವಿನ 72 ವರ್ಷಗಳ ಅಂತರದ ನಂತರ ಬಂದಿದೆ.