Sunday, December 3, 2023

Latest Posts

ASIAN GAMES| ವುಶುನಲ್ಲಿ ಬೆಳ್ಳಿಪದಕ ತನ್ನದಾಗಿಸಿಕೊಂಡ ರೋಶಿಬಿನಾ ದೇವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಗುರುವಾರ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನ ವುಶು ಸ್ಪರ್ಧೆಯಲ್ಲಿ ರೋಶಿಬಿನಾ ದೇವಿ ನೌರೆಮ್ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 23 ಕ್ಕೆ ತಲುಪಿದೆ. ಸೆಮಿಫೈನಲ್‌ನಲ್ಲಿ ರೋಶಿಬಿನಾ ವಿಯೆಟ್ನಾಂನ ಥಿ ಥು ಥುಯ್ ನ್ಗುಯೆನ್ ಅವರನ್ನು ಸೋಲಿಸಿದರು.

2018 ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಅದೇ ತೂಕದ ವಿಭಾಗದಲ್ಲಿ ರೋಶಿಬಿನಾ ಕಂಚಿನ ಪದಕವನ್ನು ಗೆದ್ದರು. ವೀಸಾ ಸಮಸ್ಯೆಯಿಂದಾಗಿ ಚೀನಾಕ್ಕೆ ಬರಲು ಸಾಧ್ಯವಾಗದ ಅರುಣಾಚಲ ಪ್ರದೇಶದ ಮೂವರು ವುಶು ಆಟಗಾರರಿಗೆ ರೋಶಿಬಿನಾ ತಮ್ಮ ಪದಕವನ್ನು ಅರ್ಪಿಸಿದ್ದಾರೆ.

ತನ್ನ ಮೂವರು ಸ್ನೇಹಿತರಿಗಾಗಿ ಚಿನ್ನದ ಪದಕ ಗೆಲ್ಲಲು ಬಯಸಿದ್ದೆ, ಬದಲಿಗೆ ಬೆಳ್ಳಿ ಪದಕವನ್ನು ಪಡೆದಿದ್ದೇನೆ ಎಂದು ರೋಶಿಬಿನಾ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!