September 23, 2026
Wednesday, September 23, 2026
spot_img

ಏಷ್ಯನ್ ಗೇಮ್ಸ್ | 87 ಕೆ.ಜಿ. ಸ್ನ್ಯಾಚ್, 111 ಕೆ.ಜಿ. ಕ್ಲೀನ್-ಜೆರ್ಕ್: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ವರ್ಷಗಳ ನಿರೀಕ್ಷೆ, ಗಾಯದ ಸವಾಲುಗಳು.. ಹಿಂದಿನ ಏಷ್ಯನ್ ಗೇಮ್ಸ್‌ನ ನಿರಾಸೆಗಳಿಗೆ ತೆರೆ ಎಳೆದ ಭಾರತದ ತಾರೆ ಮೀರಾಬಾಯಿ ಚಾನು, ಕೊನೆಗೂ ಏಷ್ಯನ್ ಗೇಮ್ಸ್ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 49 ಕೆ.ಜಿ. ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 198 ಕೆ.ಜಿ. ಭಾರ ಎತ್ತಿದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಭಾರತದ ಪರ ಗಮನಾರ್ಹ ಸಾಧನೆ ಮಾಡಿದ್ದಾರೆ.

ಉತ್ತರ ಕೊರಿಯಾದ ರಿ ಸಾಂಗ್ ಗುಮ್ ಪ್ರಥಮ

ನಾಗೋಯಾ ಸಿಟಿ ಟ್ರೇಡ್ ಆ್ಯಂಡ್ ಇಂಡಸ್ಟ್ರಿ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮೀರಾಬಾಯಿ ಒಟ್ಟು 198 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್ ವಿಭಾಗದಲ್ಲಿ 87 ಕೆ.ಜಿ. ದಾಖಲಿಸಿದ ಅವರು, ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 111 ಕೆ.ಜಿ. ಎತ್ತುವ ಮೂಲಕ ಬೆಳ್ಳಿ ಪದಕ ಖಚಿತಪಡಿಸಿಕೊಂಡರು. ಉತ್ತರ ಕೊರಿಯಾದ ರಿ ಸಾಂಗ್ ಗುಮ್ ಒಟ್ಟು 215 ಕೆ.ಜಿ. ಎತ್ತಿ ಚಿನ್ನದ ಪದಕ ಗೆದ್ದರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ತ್ರಿ ವಿಯಜಯಾನಾ ಕಂಚಿನ ಪದಕ ಪಡೆದರು.

ಇದನ್ನೂ ಓದಿ:

ಹಲವು ವರುಷಗಳ ಕಾಯುವಿಕೆ ಅಂತ್ಯ

ಮೀರಾಬಾಯಿಗೆ ಏಷ್ಯನ್ ಗೇಮ್ಸ್ ಪದಕಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದರು. 2014ರ ಇಂಚಿಯಾನ್ ಕ್ರೀಡಾಕೂಟದಲ್ಲಿ ಅವರು ಒಂಬತ್ತನೇ ಸ್ಥಾನ ಪಡೆದಿದ್ದರು. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಿಂದ ಬೆನ್ನುನೋವಿನ ಕಾರಣ ಹೊರಗುಳಿದಿದ್ದರು. 2023ರ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಪದಕದ ನಿರೀಕ್ಷೆಯಲ್ಲಿದ್ದ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಹಲವಾರು ಪದಕ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಚಾನು

ಈಗ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ, ವಿಶ್ವ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಹಲವು ಪದಕಗಳನ್ನು ಗೆದ್ದಿದ್ದಾರೆ. 2017ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2018ರಲ್ಲಿ ಪದ್ಮಶ್ರೀ ಮತ್ತು ಖೇಲ್ ರತ್ನ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ಇದುವರೆಗೆ ಕೈತಪ್ಪಿದ್ದ ಪದಕವನ್ನು ಈ ಬಾರಿ ಬೆಳ್ಳಿಯ ರೂಪದಲ್ಲಿ ತಮ್ಮದಾಗಿಸಿಕೊಂಡ ಮೀರಾಬಾಯಿ ಚಾನು, ಭಾರತದ ವೇಟ್‌ಲಿಫ್ಟಿಂಗ್ ಇತಿಹಾಸಕ್ಕೆ ಮತ್ತೊಂದು ಹೆಮ್ಮೆಯ ಅಧ್ಯಾಯ ಸೇರಿಸಿದ್ದಾರೆ.

https://www.instagram.com/p/Ddn0pMFlBPf

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !