Saturday, December 9, 2023

Latest Posts

Asian Games | ಟೇಬಲ್​​ ಟೆನಿಸ್​ ಮಹಿಳೆಯರ ಡಬಲ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್​ ಗೇಮ್ಸ್​ನಲ್ಲಿ ಟೇಬಲ್​​ ಟೆನಿಸ್​ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಈ ಮೂಲಕ ಟಿಟಿ ಸ್ಪರ್ಧೆಯಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕ ಒಲಿದುಬಂದಿದೆ.

ಉತ್ತರ ಕೊರಿಯಾದ ಸುಯೋಂಗ್ ಚಾ ಮತ್ತು ಸುಗ್ಯಾಂಗ್ ಪಾಕ್ ವಿರುದ್ಧ 4-3 ಅಂತರದಲ್ಲಿ ಸೋಲನುಭವಿಸಿದರು.

ಭಾರತ ಮೊದಲ ಗೇಮ್ ಅನ್ನು 11-7 ರಿಂದ ಗೆದ್ದುಕೊಂಡಿತು. ಮೂರನೇ ಮತ್ತು ಆರನೇ ಪಂದ್ಯಗಳಲ್ಲಿ ಕ್ರಮವಾಗಿ 7-11 ಮತ್ತು 5-11ರಿಂದ ತಂಡ ಹಿನ್ನಡೆ ಅನುಭವಿಸಿತು. ಕೊನೆಯ ಗೇಮ್​ನಲ್ಲಿ ಲಯಕ್ಕೆ ಮರಳುವಲ್ಲಿ ಎಡವಿತು. ಹೀಗಾಗಿ ಕಂಚಿಗೆ ತೃಪ್ತಿ ಪಡಬೇಕಾಯಿತು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ವಿಶ್ವದ 2ನೇ ಶ್ರೇಯಾಂಕದ ಚೀನಾದ ಮೆಂಗ್ ಚೆನ್ ಮತ್ತು ಯಿಡಿ ವಾಂಗ್ ಅವರನ್ನು ಸೋಲಿಸಿ ಡಬಲ್ಸ್ ಸ್ಪರ್ಧೆಯಲ್ಲಿ ಪದಕ ಖಚಿತಪಡಿಸಿಕೊಂಡಿದ್ದರು.

ಕಂಚಿನ ಪದಕ ಗೆದ್ದ ಟಿಟಿ ಆಟಗಾರ್ತಿಯರಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್​ ಠಾಕೂರ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಕ್ಸ್​ ಆಯಪ್​ ಖಾತೆಯಲ್ಲಿ ಟೇಬಲ್​ ಟೆನಿಸ್​ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದು ಕೊಟ್ಟ ಮುಖರ್ಜಿ ಜೋಡಿಗೆ ಹ್ಯಾಟ್ಸ್ ಆಫ್! ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!