ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್ 50 ಕೆ.ಜಿ. ಸೆಣಸಾಟದಲ್ಲಿ ಭಾರತದ ನಿಖತ್ ಝರೀನ್ ಅವರು ವಿಯೆಟ್ನಾಮ್‌ನ ಥಿ ತಮ್ ಎನ್‌ಗುಯೆನ್ ಅವರನ್ನು ಭಾನುವಾರ 5-0 ಯಿಂದ ಸೋಲಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ನಿಖತ್ ಮೊದಲ ಸುತ್ತಿನಿಂದಲೇ ನಿಯಂತ್ರಣ ಸಾಧಿಸಿದರು. ಈ ರೀತಿಯ ಫಲಿತಾಂಶ (ಏಕಪಕ್ಷೀಯ) ನಿರೀಕ್ಷೆ ಮಾಡಿರಲಿಲ್ಲ. ಇದು ಹೊರದೇಶದಲ್ಲಿ ನಡೆಯುತ್ತಿರುವ ಕಾರಣ ನಾನು ಅಂಥ ಪ್ರಯತ್ನಕ್ಕೆ ಮುಂದಾದೆ’ ಎಂದು ನಿಖತ್ ಹೇಳಿದರು.
ಗೆದ್ದ ಪ್ರೀತಿ:
ಪ್ರತಿಭಾನ್ವಿತ ಬಾಕ್ಸರ್ ಪ್ರೀತಿ ಪವಾರ್ ಕೂಡ ಅಮೋಘ ಪ್ರದರ್ಶನ ನೀಡಿ ಜೋರ್ಡಾನ್‌ನ ಸಿಲಿನಾ ಅಲ್ಹಾಸನತ್ ಅವರನ್ನು ಆರ್‌ಎಸ್‌ಸಿ (ರೆಫ್ರಿಯಿಂದ ಸೆಣಸಾಟ ನಿಲುಗಡೆ) ಆಧಾರದಲ್ಲಿ ಸೋಲಿಸಿದರು. ರಕ್ಷಣಾತ್ಮಕವಾಗಿ ಸೆಣಸಾಟ ಆರಂಭಿಸಿದ ಪ್ರೀತಿ ನಂತರ ಆಕ್ರಮಣಕಾರಿ ಆದರು. ಎರಡು ಮತ್ತು ಮೂರನೇ ಸುತ್ತಿನಲ್ಲಿ ಕೌಂಟ್‌ಗಳ ನಂತರ ರೆಫ್ರಿ ಹೋರಾಟ ನಿಲ್ಲಿಸಿದರು.
ಪ್ರೀತಿ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನದ ಪ್ರಬಲ ಸ್ಪರ್ಧಿ ಝೈನಾ ಶೆಕೆರ್‌ಬೆಕೊವಾ ಅವರನ್ನು ಎದುರಿಸಲಿದ್ದಾರೆ. ಒಂದೊಮ್ಮೆ ಪ್ರೀತಿ ಗೆದ್ದಲ್ಲಿ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಜೊತೆಗೆ ಪದಕವೂ ಖಚಿತವಾಗಲಿದೆ.