ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಲಿಸುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಕಡಬ ಅಂಚೆ ಕಚೇರಿ ಬಳಿ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಕಡಬ ಸಮೀಪದ ಕಳಾರ ಕುದ್ಕೊಳಿ ನಿವಾಸಿ ಅಚ್ಚುತ ಗೌಡ (63) ಮೃತ ಪಟ್ಟವರು.

ಅವರು ಕಡಬದಿಂದ ಬಸ್ಸು ಏರಿ ಮನೆಯ ಕಡೆ ಹೊರಟು ಬಸ್ಸು ಕಡಬ ಅಂಚೆ ಕಚೇರಿ ಬಳಿ ತಲುಪುತ್ತಿದ್ದ oತೆಯೇ ತಿರುವಿನಲ್ಲಿ ಆಯತಪ್ಪಿ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ. ಅವರೊಂದಿಗೆ ಬಲ್ಯದ ಚಂದ್ರ ಶೇಖರ ಎಂಬವರೂ ಕೆಳಕ್ಕೆ ಬಿದ್ದಿದ್ದಾರೆ. ಚಂದ್ರಶೇಖರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರೆ , ಗಾಯಗೊಂಡ ಅಚ್ಚುತ ಗೌಡ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಮೃತರು ಮೂಲತ ಪೆರಾಬೆ ಗ್ರಾಮದ ಬೀರಂತಡ್ಕ ನಿವಾಸಿ. ಇವರು ಕಳಾರದಲ್ಲಿ ಭೂಮಿ ಖರೀದಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!