Tuesday, March 28, 2023

Latest Posts

ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಿದ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಬಿಟ್ಟಿದ್ದಾರೆ. ಈ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೈಲ್ವೆ ಸಚಿವಾಲಯ ಮಾಹಿತಿ ನೀಡಿದ್ದು, ಸೋಮವಾರ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಸುರೇಖಾ ಯಾದವ್ ಅವರು ಪೈಲಟ್ ಮಾಡಿದರು. ರೈಲು ಮಾರ್ಚ್ 13 ರಂದು ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟಿತು ಮತ್ತು ನಿಗದಿತ ಸಮಯಕ್ಕೆ ಆಗಮನಕ್ಕೆ ಐದು ನಿಮಿಷಗಳ ಮೊದಲು CSMT ತಲುಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

450-ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಸುರೇಖಾ ಯಾದವ್ ಅವರನ್ನು CSMT ನಲ್ಲಿ ಪ್ಲಾಟ್ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ‘ವಂದೇ ಭಾರತ್ – ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ.

ವಂದೇ ಭಾರತ್ ಎಕ್ಸ್ಪ್ರೆಸ್ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ತಮ್ಮ ಕೇಂದ್ರ ರೈಲ್ವೆಯ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಹೇಳಿದೆ.

ವಂದೇ ಭಾರತ್ ರೈಲನ್ನು ಚಲಾಯಿಸಲು ನೀಡಿದ ಅವಕಾಶಕ್ಕಾಗಿ ಅವರು ಕೃತಜ್ಞತೆ ಎಂದು ಹೇಳಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!