Friday, March 31, 2023

Latest Posts

ವಿಶ್ವದ 50 ಅತ್ಯಂತ ಮಾಲಿನ್ಯ ನಗರಗಳ ಹೆಸರು ಬಿಡುಗಡೆ: ಲಿಸ್ಟ್ ನಲ್ಲಿರುವ 39 ಸಿಟಿ ಭಾರತದಲ್ಲೇ ಇದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನ ಕಳೆದಂತೆ ದೇಶದಲ್ಲಿ ವಾಯು ಮಾಲಿನ್ಯ ಸಮಸ್ಯೆ ಹೆಚ್ಚುತ್ತಿದ್ದು, ಮುಖ್ಯವಾಗಿ ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ನಗರಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.

ಈ ಕುರಿತು ಇದೀಗ ವಿಶ್ವದ ಅತ್ಯಂತ ಮಾಲಿನ್ಯ ನಗರ ಪಟ್ಟಿ ಬಿಡುಗಡೆಯಾಗಿದ್ದು, ವಿಶ್ವದ 50 ಅತ್ಯಂತ ಮಾಲಿನ್ಯ ನಗರಗಳನ್ನು ಹೆಸರಿಸಲಾಗಿದೆ. ಇದರಲ್ಲಿ 39 ನಗರ ಭಾರತದಲ್ಲೇ ಇದೆ ವಿಶ್ವದ ಮಾಲಿನ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ. ಮೊದಲ ಸ್ಥಾನ ಮಧ್ಯ ಆಫ್ರಿಕಾದಲ್ಲಿರುವ ಚಾದ್ ದೇಶಕ್ಕೆ ಸಂದಿದೆ.

ವಿಶ್ವದ ಅತೀ ಹೆಚ್ಚು ಮಾಲಿನ್ಯ ನಗರಗಳ ಪೈಕಿ ಮೊದಲ ಸ್ಥಾನ ಚಾದ್ ದೇಶದ ಎನ್ ಜಮೇನಾ ನಗರ ಗುರಿಯಾಗಿದೆ. ರಾಜಧಾನಿ ದೆಹಲಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆದರೆ ನವ ದೆಹಲಿ 2ನೇ ಮಾಲಿನ್ಯ ನಗರಗಳ ಪೈಕಿ 2ನೇ ಸ್ಥಾನದಲ್ಲಿದೆ. ಭಾರತದ ಅತ್ಯಂತ ಮಾಲಿನ್ಯ ನಗರದಳಲ್ಲಿ ನವದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕೋಲ್ಕತಾ ಎರಡನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಮಾಲಿನ್ಯ ನಗರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಚೆನ್ನೈನಲ್ಲಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ರಾಜಸ್ಥಾದನ ಭಿವಾಡಿ, ಪುಣೆ, ಮುಂಬೈ ಸೇರಿದಂತೆ ಹಲವು ನಗರಳು ಮಾಲಿನ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ವಿಶ್ವದ ಅತ್ಯಂತ ಮಾಲಿನ್ಯ ದೇಶಗಳ ಪಟ್ಟಿ
1) ಚಾದ್
2) ಇರಾಕ್
3) ಪಾಕಿಸ್ತಾನ
4) ಬಹ್ರೈನ್
5) ಬಾಂಗ್ಲಾದೇಶ
6) ಬರ್ಕಿನಾ ಫಾಸೊ
7) ಕುವೈಟ್
8) ಭಾರತ
9) ಈಜಿಪ್ಟ್
10) ತಜಕಿಸ್ತಾನ

ಆಸ್ಟ್ರೇಲಿಯಾ, ಎಸ್ಟೊನಿಯಾ, ಫಿನ್‌ಲ್ಯಾಂಡ್, ಗ್ರೆನೆಡಾ, ಐಸ್‌ಲೆಂಡ್ ಹಾಗೂ ನ್ಯೂಜಿಲೆಂಡ್ ಅತೀ ಕಡಿಮೆ ಮಾಲಿನ್ಯ ಹೊಂದಿದ ದೇಶಗಳಾಗಿವೆ. ಇಲ್ಲಿನ ಬಹುತೇಕ ಸ್ಥಳಗಳು ಶೂನ್ಯ ಮಾಲಿನ್ಯ ಪ್ರಮಾಣ ಹೊಂದಿದೆ. ಈ ಮೂಲಕ ವಾಸಕ್ಕೆ ಅತ್ಯಂತ ಯೋಗ್ಯ ನಗರ ಎಂದು ಗುರುತಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!