ಆರೋಗ್ಯ ಸೇವೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ‘ನಮ್ಮ ಕ್ಲಿನಿಕ್‌’ಗೆ ಇಂದು ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಡವರಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ರಾಜ್ಯಾದ್ಯಂತ 114 ನಮ್ಮ ಕ್ಲಿನಿಕ್‌ಗಳನ್ನು ರೂಪಿಸಿದ್ದು, ಇಂದಿನಿಂದ ಕ್ಲಿನಿಕ್ ಕಾರ್ಯಾರಂಭ ಮಾಡಲಿವೆ.

ಇಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಲಿನಿಕ್‌ಗಳಿಗೆ ಚಾಲನೆ ನೀಡಲಿದ್ದು, ಒಟ್ಟಾರೆ 114  ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

 

ಸದ್ಯಕ್ಕೆ ರಾಜ್ಯಾದ್ಯಂತ 114  ಕ್ಲಿನಿಕ್‌ಗಳು ಆರಂಭವಾಗಲಿದೆ, ಇನ್ನೊಂದು ತಿಂಗಳಲ್ಲಿ 438 ಕ್ಲಿನಿಕ್‌ಗಳು ಕಾರ್ಯನಿರ್ವಹಿಸಲಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ. ಜನವರಿ ಎರಡನೇ ವಾರದಲ್ಲಿ ಜನರಿಗೆ ಸೇವೆ ನೀಡಲು ಆರಂಭಿಸಲಾಗುತ್ತವೆ.

ಕೊಳಗೇರಿ ನಿವಾಸಿಗಳು, ಬಡವರು, ಕಾರ್ಮಿಕರು, ಇತರರಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರೆಯಲಿ ಎನ್ನುವ ಕಾರಣದಿಂದ ನಮ್ಮ ಕ್ಲಿನಿಕ್ ಆರಂಭವಾಗುತ್ತಿದೆ. ದಿನಕ್ಕೆ 10 ರಿಂದ 20 ಸಾವಿರ ಜನರಿಗೆ ವೈದ್ಯಕೀಯ ಸೇವೆ ಒದಗಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!