ಕೇಂದ್ರದ ಆಕಾಂಕ್ಷಿ ಜಿಲ್ಲೆಗಳ ಮಾದರಿಯಲ್ಲೇ ಕರ್ನಾಟಕದಲ್ಲಿ ಆಕಾಂಕ್ಷಿ ತಾಲೂಕುಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹಿಂದುಳಿದ ಜಿಲ್ಲೆಗಳನ್ನು ಆಕಾಂಕ್ಷಿ ಜಿಲ್ಲೆಗಳೆಂದು ಕರೆದು ಅವುಗಳಿಗೆ ಪೌಷ್ಟಿಕಾಂಶ, ನೈರ್ಮಲ್ಯ ಸೇರಿದಂತೆ ನಿರ್ದಿಷ್ಟ ಸೂಚ್ಯಂಕಗಳಲ್ಲಿ ಅವುಗಳ ಆಕಾಂಕ್ಷೆ ಹೆಚ್ಚಿಸುವ ಹೊಸಮಾರ್ಗವನ್ನು ಕೇಂದ್ರದ ಮೋದಿ ಸರ್ಕಾರ ಕೆಲವರ್ಷಗಳ ಹಿಂದಿನಿಂದಲೇ ರೂಪಿಸಿತ್ತು.

ಇದೀಗ ಅದೇ ಮಾದರಿಯಲ್ಲಿ ಕರ್ನಾಟಕದ ಹಿಂದುಳಿದ ತಾಲುಕುಗಳನ್ನು ಆಕಾಂಕ್ಷಿ ತಾಲೂಕುಗಳನ್ನಾಗಿ ಪರಿಗಣಿಸಿ ಅವನ್ನು ನಿರ್ದಿಷ್ಟ ಸೂಚ್ಯಂಕಗಳ ಮಾನದಂಡದಲ್ಲಿಯೇ ಅಭಿವೃದ್ಧಿ ಸಾಧಿಸುವಂತೆ ಪ್ರೇರೇಪಿಸುವ ಹೆಜ್ಜೆ ಇಡಲಾಗಿದೆ.  ರಾಜ್ಯಗಳ ಪೈಕಿ ಕರ್ನಾಟಕವೇ ಇಂಥ ಪರಿಕಲ್ಪನೆಯಲ್ಲಿ ಮೊದಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!