ಅಸ್ಸಾಂನಲ್ಲಿ ವಿಷಪೂರಿತ ಕಾಡು ಅಣಬೆ ಸೇವಿಸಿ 13 ಜನರ ಸಾವು; 39 ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಸ್ಸಾಂನಲ್ಲಿ ವಿಷಪೂರಿತ ಕಾಡು ಅಣಬೆಗಳನ್ನು ಸೇವಿಸಿ ಕಳೆದ ಒಂದು ವಾರದಲ್ಲಿ ಮಗು ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಅಲ್ಲದೆ 39 ಜನ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಕಾರಿ ಅಣಬೆಗಳನ್ನು ಸೇವಿಸಿ ಸಾವನ್ನಪ್ಪಿದವರು ದಿಬ್ರುಗಢ್, ತಿನ್ಸುಕಿಯಾ, ಶಿವಸಾಗರ್ ಮತ್ತು ಚರೈಡಿಯೊ ಜಿಲ್ಲೆಗಳವರು. ಅವರಲ್ಲಿ ಹೆಚ್ಚಿನವರು ಚಹಾ ತೋಟದ ಪ್ರದೇಶಗಳಿಂದ ಬಂದವರು. ಅ ಅಸ್ಸಾಂ ನ ಈ ನಾಲ್ಕು ಭಾಗಗಳಲ್ಲಿ ಪ್ರತಿ ವರ್ಷವೂ ವಿಷಕಾರಿ ಅಣಬೆಗಳನ್ನು ಸೇವಿಸಿ ಅನಾರೋಗ್ಯಕ್ಕೊಳಗಾಗುವ ಪ್ರಕರಣಗಳು ಸಂಭವಿಸುತ್ತವೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಅಣಬೆ ತಿಂದು ಅಸ್ವಸ್ಥರಾದವರನ್ನು ದಿಬ್ರುಗಢ ಜಿಲ್ಲೆಯ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದಒಂದು ವಾರದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. 39 ರೋಗಿಗಳು ಅಸ್ವಸ್ಥರಾಗಿದ್ದಾರೆ ಎಂದು ಎಎಂಸಿಎಚ್‌ನ ಅಧೀಕ್ಷಕ ಡಾ ಪ್ರಶಾಂತ ದಿಹಿಂಗಿಯಾ ಹೇಳಿದ್ದಾರೆ.
ಈ ಎಲ್ಲಾ ಸಾವುಗಳು ಯಕೃತ್ತು ಮತ್ತು ಮೂತ್ರಪಿಂಡ ವೈಫಲ್ಯದಿಂದ ಸಂಭವಿಸಿವೆ. ಪ್ರಸ್ತುತ ಒಬ್ಬ ರೋಗಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದ್ದು, ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!