ಉದ್ದನೆಯ ಬಾಲ ಹೊಂದಿರುವ ಯುವಕನ ವಿಡಿಯೋ ವೈರಲ್;‌ ಹನುಮಂತನ ಅವತಾರವೆನ್ನುತ್ತಿದ್ದಾರೆ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೇಪಾಳದ ಹದಿಹರೆಯದ ಯುವಕನೊಬ್ಬ ತನ್ನ ಉದ್ದನೆಯ ಬಾಲದಿಂದಾಗಿ ಭಾರೀ ಪ್ರಸಿದ್ಧಿಗೆ ಬಂದಿದ್ದಾನೆ.
ದೇಶಾಂತ್ ಅಧಿಕಾರಿ ಎಂಬ ಹೆಸರಿನ 16 ವರ್ಷದ ಯುವಕನ ಬೆನ್ನಿನ ಮೇಲೆ 70 ಸೆಂ.ಮೀಯಷ್ಟು ರೋಮಮಯ ಬಾಲ ಹುಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆತನ ದೇಹದಲ್ಲಿ ಬಾಲ ಮೂಡಿರುವುದು ವೈರಲ್ ಆದ ಬಳಿಕ ಆನೇಕರು ಅತ ದೇವರ ಅವತಾರ ಎಂದೇ ಹೇಳುತ್ತಿದ್ದಾರೆ!.
ಬೆನ್ನೆಲುಬಿನ ಕಾಲಮ್‌ನ ಕೆಳಭಾಗದಲ್ಲಿರುವ ಕೋಕ್ಸಿಕ್ಸ್‌ ಭಾಗದಲ್ಲಿರುವ ಈ ಬಾಲವು ಆತನಿಗೆ ಹುಟ್ಟಿನೊಂದಿಗೆ ಬಂದಿತ್ತು. ಅದನ್ನು ಗುರುತಿಸಿದ ಪೋಷಕರು ಅವನನ್ನು ಹಲವಾರು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ದರು. ಸ್ಥಳೀಯ ಅರ್ಚಕರೊಬ್ಬರು ಆತನ ಬಾಲದ ಬಗ್ಗೆ ವಿಭಿನ್ನ ವಿಚಾರವೊಂದನ್ನು ಹೇಳುವವರೆಗೂ ಅವರು ಚಿಕಿತ್ಸೆಗಾಗಿ ದೇವಿದೇಶಗಳ ವೈದ್ಯರನ್ನು ಸಂಪರ್ಕಿಸುತ್ತಿದ್ದರು. ಆ ಬಳಿಕ ಅವರ ಯೋಚನಾದಾಟಿ ಬದಲಾಯ್ತು.
ದೇಶಾಂತ್‌ ಹಿಂದೂ ದೇವರಾದ ಹನುಮಂತನ ಪುನರ್ಜನ್ಮ ಎಂದು ಆ ಅರ್ಚಕ ಪೋಷಕರಿಗೆ ತಿಳಿಸಿದರು. ಇದು ಪಾಲಕರಲ್ಲಿ ಸಂತಸ ಮೂಡಿಸಿತು. ಅಲ್ಲದೇ ಸ್ಥಳೀಯರು ಸಹ ಆತನನ್ನು ದೇವರ ಪುನರ್ಜನ್ಮವೆಂದೇ ಆರಾಧಿಸಲಾರಂಭಿಸಿದರು.

 

ಪ್ರಾರಂಭದಲ್ಲಿ ಬಾಲದಿಂದಾಗಿ ಮುಜುಗರಕ್ಕೆ ಒಳಗಾಗುತ್ತಿದ್ದ ದೇಶಾಂತ್, ತನ್ನನ್ನು ಜನರು ದೇವರ ಅವತಾರ ಎಂದು ನೋಡಲಾರಂಭಿಸಿದ ಮೇಲೆ ಬಾಲವನ್ನು ತೋರಿಸುತ್ತಿದ್ದಾನೆ. ಅಲ್ಲದೆ ಆತ ತನ್ನ ಬಾಲದ ಬಗ್ಗೆ ಯೂಟ್ಯೂಬ್‌ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ತನ್ನ ಬಗ್ಗೆ ಹೇಳಿಕೊಂಡಿದ್ದಾನೆ.
ನನಗೆ ಬಾಲವಿರುವ ವಿಚಾರನ್ನು ನಾನು ಒಪ್ಪಿಕೊಂಡಿದ್ದೇನೆ. ಈಗ ಅದನ್ನು ತೋರಿಸಲು ನನಗೆ ಯಾವುದೇ ಮುಜುಗರ ಎನಿಸುವುದಿಲ್ಲ. ಟಿಕ್ ಟಾಕ್‌ನಲ್ಲಿ ಸಹ ನನ್ನ ವೀಡಿಯೊ ವೈರಲ್ ಆಗಿದೆ. ಈಗ ಬಹಳಷ್ಟು ಜನರು ನನ್ನನ್ನು ನನ್ನನ್ನು ಹನುಮಾನ್ (ಮಂಗಗಳ ದೇವರು) ಮತ್ತು ಶಿವಾಜಿ (ಹಿಂದೂ ದೇವರು) ಎಂದು ಕರೆಯುತ್ತಾರೆ. ಅದರ ಬಗ್ಗೆ ನನಗೆ ಸಂತೋಷವಿದೆ ಎಂದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!