ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೀಲಿಚಿತ್ರ ಪ್ರಸಾರ; ತನಿಖೆಗೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್‌ ಆಯಿಲ್‌ ಕಂಪನಿಯು ಅಸ್ಸಾಂನ ಟೆನ್ಸುಕಿಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಹಿಂಬದಿ ಸ್ಕ್ರೀನ್‌ ನಲ್ಲಿ ಅಶ್ಲೀಲ ವೀಡಿಯೊ ಕ್ಲಿಪ್ ಪ್ಲೇ ಆಗಿದ್ದರಿಂದ ಕೇಂದ್ರ ಸಚಿವ ರಾಮೇಶ್ವರ್ ತೇಲಿ, ಅಸ್ಸಾಂ ಕಾರ್ಮಿಕ ಸಚಿವ ಸಂಜಯ್ ಕಿಸಾನ್ ಮತ್ತು ಇಂಡಿಯನ್ ಆಯಿಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಮುಜುಗರಕ್ಕೊಳಗಾದ ಘಟನೆ ಸಂಭವಿಸಿತ್ತು.
ಈ ಸಂಬಂಧ ಅಸ್ಸಾಂನ ಅಪರಾಧ ವಿಭಾಗವು ತನಿಖೆಯನ್ನು ಪ್ರಾರಂಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ವ್ಯಕ್ತಿಗಳ ವಿಚಾರಣೆ ನಡೆಸಲಾಗಿದ್ದು, ಕಾರ್ಯಕ್ರಮದ ಪ್ರೊಜೆಕ್ಟರ್ ಆಪರೇಟರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಡಿಯನ್ ಆಯಿಲ್‌ ಸಂಸ್ಥೆಯು ಟಿನ್ಸುಕಿಯಾದಲ್ಲಿ ಆಯೋಜಿಸಿದ್ದ ಮೆಥನಾಲ್ ಸಂಯೋಜಿತ ಎಂ-15 ಪೆಟ್ರೋಲ್‌ನ ಪ್ರಯೋಗಿಕ ಬಳಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ನೀತಿ ಆಯೋಗದ ಸದಸ್ಯ ಡಾ ವಿ ಕೆ ಸಾರಸ್ವತ್, ಇಂಡಿಯನ್ ಆಯಿಲ್ ಅಧ್ಯಕ್ಷ ಎಸ್ ಎಂ ವೈದ್ಯ, ರಾಜ್ಯ ಕಾರ್ಮಿಕ ಸಚಿವ ಸಂಜೋಯ್ ಕಿಶನ್, ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಪಿಎಲ್) ಅಧ್ಯಕ್ಷ ಬಿಕುಲ್ ದೇಕಾ ಮತ್ತಿತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.
ವರದಿಗಳ ಪ್ರಕಾರ, ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ವೇದಿಕೆಯ ಮೇಲೆ ಭಾಷಣವನ್ನು ಮಾಡುತ್ತಿದ್ದಾಗ, ಯೋಜನೆಯ ಕ್ಲಿಪ್‌ಗಳನ್ನು ಪ್ರದರ್ಶಿಸುವ ಪ್ರೊಜೆಕ್ಟರ್ ಪರದೆಯ ಮೇಲೆ ಅಶ್ಲೀಲ ಚಲನಚಿತ್ರಗಳು ಪ್ರಸಾರವಾಗತೊಡಗಿದೆ. ಇದರಿಂದ ಕಾರ್ಯಕ್ರಮದಲ್ಲಿದ್ದವರು ಮುಜುಗರ ಅನುಭವಿಸಿದರು. ಆಪರೇಟರ್ ತರಾತುರಿಯಲ್ಲಿ ಅದನ್ನು ನಿಷ್ಕ್ರಿಯಗೊಳಿಸುವ ಮೊದಲು ಕ್ಲಿಪ್ ಹಲವಾರು ಸೆಕೆಂಡುಗಳ ಕಾಲ ಓಡಿತು. ಭಾಷಣ ಆಲೈಸುವುದರಲ್ಲಿ ಮಗ್ನನಾಗಿದ್ದರಿಂದ ಹಿಂಬದಿಯ ಸ್ಕ್ರೀನ್‌ ನಲ್ಲಿ ಏನು ಪ್ರಸಾರವಾಯಿತು ತಿಳಿಯಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ರಾಮೇಶ್ವರ್ ತೇಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!