“ದೇಶದಲ್ಲಿ ಸಂಕಷ್ಟವಿದೆ ಎಂದು ಡೋಲು ಬಡಿದು ವಿದೇಶದಲ್ಲಿ ಪಾರ್ಟಿ ಮಾಡಿದ್ರು ರಾಹುಲ್” – ರಾಹುಲ್ ಪಾರ್ಟಿ ವಿಡಿಯೋಕ್ಕೆ ಜನರ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೇಪಾಳದಲ್ಲಿ ರಾಹುಲ್‌ ಗಾಂಧಿ ಪಾರ್ಟಿ ಮಾಡುತ್ತಿದ್ದಾರೆ ಎಂದು ಹೇಳುವ ವೀಡಿಯೋಗಳು ವೈರಲ್‌ ಆಗಿವೆ.  ತಮ್ಮ ಮಿತ್ರರಾದ ಸಿಎನ್ಎನ್ ಪತ್ರಕರ್ತರೊಬ್ಬರ ಮದುವೆಗೆ  ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ನೇಪಾಳದ ಕಾಠ್ಮಂಡುವಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸದಾ ಒಂದಿಲ್ಲೊಂದು ವಿಚಾರಗಳಿಗೆ ಟೀಕೆಗೊಳಗಾಗುವ ರಾಹುಲ್‌ ಗಾಂಧಿಗೆ ಇಂಥದ್ದು ಹೊಸದೇನಲ್ಲ. ಆದರೆ ಕಾಂಗ್ರೆಸ್‌ ಪಕ್ಷವು ಕಷ್ಟದಲ್ಲಿರುವಾಗಲೇ ವಿದೇಶ ಪ್ರವಾಸ ಮಾಡುವ ರಾಹುಲ್‌ ಪ್ರತೀಸಲವೂ ನಗೆಪಾಟಲಿಗೀಡಾಗುತ್ತಾರೆ.

ಅವರ ಈ ವೀಡಿಯೋದ ಕುರಿತು ಟ್ವೀಟರ್ ನಲ್ಲಿ ಹಲವರು ಹಾಸ್ಯಾಸ್ಪದವಾಗಿ ಟ್ವೀಟ್‌ ಮಾಡಿದ್ದಾರೆ.

“ಒಬ್ಬ ಬಾರತೀಯ ನಾಯಕ ಜಿ7 ಕ್ಲಬ್‌ ಸೇರೊಕೊಳ್ಳಲು ಆಮಂತ್ರಿತರಾಗಿದ್ದರೆ ಇನ್ನೊಬ್ಬ ನಾಯಕ ನೈಟ್‌ ಕ್ಲಬ್‌  ನಲ್ಲಿದ್ದಾನೆ. ಇದು ಇಬ್ಬರು ಭಾರತೀಯರ ಕಥೆ” ಎಂದು ದೇಶದ ಪ್ರಸಿದ್ಧ ಬ್ಯಸಿನೆಸ್‌ಮೆನ್ ಸುಹೇಲ್‌ ಸೇಠ್‌ ಟ್ವೀಟ್‌ ಮಾಡಿದ್ಧಾರೆ.

 

“ದೇಶದಲ್ಲಿ ಸಂಕಷ್ಟವಿದೆ ಎಂದು ಡೋಲು ಬಡಿದು ರಾಹುಲ್‌ ವಿದೇಶದಲ್ಲಿ ಆ ತಾಳಕ್ಕೆ ಕುಣಿಯುತ್ತಿದ್ದಾರೆ” ಎಂದು ಇಲ್ಲೊಬ್ಬ ಆಡಿಕೊಂಡಿದ್ದಾನೆ

“ಜೋರಾಗಿ(ಪಕ್ಷ ಸೋಲಲು) ಕೆಲಸ ಮಾಡಿ, ಆಮೇಲೆ ಇನ್ನೂ ಜೋರಾಗಿ ಪಾರ್ಟಿಮಾಡಿ”  – “ಇದು ಶ್ರೀಮಂತ ಮಕ್ಕಳ ಜೀವನ” ಎನ್ನುವ ಮೂಲಕ ರಾಹುಲ್‌ ಗಾಂಧಿಯ ಕಾಲೆಳೆಯಲಾಗಿದೆ.

ಇನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ “ಅವರೊಬ್ಬ ಖಾಯಂ ಪ್ರವಾಸಿಗ ಮತ್ತು ಪಾರ್ಟ್‌ ಟೈಂ ರಾಜಕಾರಣಿ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!