ಸರ್ಕಾರಿ ಶಾಲೆಗೆ ಗೋಮಾಂಸ ತಂದ ಮುಖ್ಯಶಿಕ್ಷಕಿಗೆ ಜೈಲುಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಧ್ಯಾಹ್ನದ ಊಟಕ್ಕೆ ಗೋಮಾಂಸ ತಂದಿದ್ದ ಆರೋಪದ ಮೇಲೆ ಗೋಲ್‌ಪಾರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
56 ವರ್ಷದ ದಾಲಿಮಾನ್ ನೆಸ್ಸಾ ಶಾಲೆಗೆ ಗೋಮಾಂಸ ತಂದ ಆರೋಪ ಹೊತ್ತಿದ್ದರು. ಈ ಕುರಿತು ಶಾಲಾ ಆಡಳಿತ ಸಮಿತಿ ದೂರು ದಾಖಲಿಸಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಶಿಕ್ಷಕಿ ಮಧ್ಯಾಹ್ನದ ಊಟಕ್ಕೆ ಬೀಫ್ ತಂದಿದ್ದರು. ಅಷ್ಟೇ ಅಲ್ಲದೇ ತಾವು ತಿನ್ನುವುದರ ಜೊತೆಗೆ ಸಹೋದ್ಯೋಗಿಗಳೊಂದಿಗೂ ಆಹಾರವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕವಾಗಿ ಬೀಫ್ ತಿಂದಿರುವುದು ಉಳಿದವರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಶಾಲಾ ಆಡಳಿತ ಮಂಡಳಿ ದೂರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯು ಶಾಲೆಯಲ್ಲಿನ ಎರಡೂ ಧಾರ್ಮಿಕ ಸಮುದಾಯಗಳನ್ನು ಅಸಮಾಧಾನಗೊಳಿಸಿದೆ ಎಂದು ಅವರು ಹೇಳಿದರು.
ನೆಸ್ಸಾ ವಿರುದ್ಧ ಸೆಕ್ಷನ್ 153A (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷಕಿಯನ್ನು ದಸ್ತಗಿರಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!