ಮಸ್ಕ್‌ ಲೈಂಗಿಕ ದೌರ್ಜನ್ಯ ಆರೋಪ: ಮುಚ್ಚಿಡಲು ಸ್ಪೇಸ್‌ ಎಕ್ಸ್‌ ಏನು ಮಾಡಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವಿಟರ್‌ ಮತ್ತು ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನು ಮುಚ್ಚಿಡಲು ಆತನ ಕಂಪನಿಯೇ ಆದ ಸ್ಪೇಸ್‌ ಎಕ್ಸ್‌ ಹಣಪಾವತಿ ಪಾವತಿ ಮಾಡಿತ್ತು ಎಂದು ಬಿಸ್ನೆಸ್‌ ಇನ್‌ಸೈಡರ್‌ ವರದಿ ಮಾಡಿದೆ.

2016ರಲ್ಲಿ ಫ್ಲೈಟ್‌ ಅಟೆಂಡೆಂಟ್‌ ಆಗಿ ಸೇರಿದ್ದ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳದ ಆರೋಪದ ಕುರಿತು ಮೌನವಾಗಿರಲು ಸ್ಪೇಸ್‌ ಎಕ್ಸ್‌ ನಿಂದ 2,50,000 ಡಾಲರ್‌ ಪಾವತಿಸಲಾಗಿದೆ. ಸ್ಪೇಸ್‌ಎಕ್ಸ್‌ನ ಕಾರ್ಪೊರೇಟ್ ಜೆಟ್ ಫ್ಲೀಟ್‌ಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯು ಎಲಾನ್‌ ಮಸ್ಕ್‌ ಅಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ, ಒತ್ತಾಯಪೂರ್ವಕವಾಗಿ ನಗ್ನವಾಗಿ ಮಸಾಜ್‌ ಮಾಡಲು ಒತ್ತಾಯಿಸಿದ್ದಾರೆ, ಈ ಕುರಿತು ಮಸ್ಕ್‌ ತನ್ನ ಗಲ್ಫ್‌ಸ್ಟ್ರೀಮ್ G650ER ನಲ್ಲಿ ಖಾಸಗಿ ಕ್ಯಾಬಿನ್‌ನಲ್ಲಿ ಆಕೆಯ ಬಳಿ ಪ್ರಸ್ತಾಪಿಸಿ ತಮ್ಮ ನಗ್ನ ಶರೀರ ತೋರಿಸಿ ಸಹಕರಿಸುವಂತೆ ಒತ್ತಾಯಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.

ತನ್ನ ಹಕ್ಕುಗಳ ರಕ್ಷಣೆಗೆ ಮಹಿಳೆಯು ಅರೋಪಿಸಿದ ಪಟ್ಟಿಯಿಂದ ಈ ವಿಷಯಗಳು ಬಹಿರಂಗವಾಗಿದ್ದು ಇದರಲ್ಲಿ ಘಟನೆಗೆ ಸಂಬಂಧಿಸಿದ ಇಮೇಲ್‌ ಸಂದೇಶಗಳು ಹಾಗೂ ಇತರ ದಾಖಲೆಗೆಳು ಲಭ್ಯವಾಗಿದೆ ಎಂದು ಇನ್‌ಸೈಡರ್‌ ಹೇಳಿದೆ.

ಆದರೆ ಈ ಆರೋಪವನ್ನು ಮಸ್ಕ್‌ ತಿರಸ್ಕರಿಸಿದ್ದು ʼಈ ಕಥೆಯಲ್ಲಿ ಇನ್ನೂ ಬಹಳಷ್ಟಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವರದಿಯು ರಾಜಕೀಯ ಪ್ರೇರಿತ ಎಂದು ಅರೋಪಿಸಿರುವ ಮಸ್ಕ್‌ ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!