ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ನಂಬಿ ಮೋಸ ಹೋದ ಘಟನೆಗಳ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಅಸ್ಸಾಂ ಪೊಲೀಸರು ದಾರಿ ತಪ್ಪಿ, ಸ್ಥಳೀಯರಿಂದ ಒದೆ ತಿಂದ ಪ್ರಸಂಗ ನಡೆದಿದೆ.
ಅಸ್ಸಾಂನ 16 ಪೊಲೀಸರು ಪ್ರಕರಣ ಒಂದನ್ನು ಬೇಧಿಸಲು ಹೊರಟಿದ್ದರು. ಸರಿಯಾದ ದಾರಿ ಗೊತ್ತಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದರು. ಅಸ್ಸಾಂನಿಂದ ಹೊರಟ ಪೊಲೀಸರು ನಾಗಲ್ಯಾಂಡ್ ಒಂದು ಹಳ್ಳಿಗೆ ಗೊತ್ತಾಗದೇ ಬಂದಿದ್ದಾರೆ. ಪೊಲೀಸರ ತಂಡವನ್ನು ನೋಡಿದ ಅಲ್ಲಿನ ಸ್ಥಳೀಯರು, ಅವರನ್ನು ಅನುಮಾನಿಸಿ ಒದೆ ನೀಡಿದ್ದಾರೆ.
ಈ ಘಟನೆ ಮಂಗಳವಾರ ರಾತ್ರಿ ನಾಗಲ್ಯಾಂಡ್ನ ಮೊಕೊಕ್ಚುಂಗ್ ಜಿಲ್ಲೆಯಲ್ಲಿ ನಡೆದಿದೆ. ಅಪರಾಧಿಗಳ ಬೆನ್ನು ಬಿದ್ದಿದ್ದ ಪೊಲೀಸರು, ಗೊತ್ತಾಗದೇ ಕೊಕೊಚ್ಚುಂಗ್ ಗಡಿ ಪ್ರವೇಶ ಮಾಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿದೆ. ಕೊನೆಗೆ ಅವರನ್ನು ನಾಗಲ್ಯಾಂಡ್ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾಗಲ್ಯಾಂಡ್ನಲ್ಲಿರುವ ಟೀ ಗಾರ್ಡನ್ ಅಸ್ಸಾಂನಲ್ಲಿ ಇರುವಂತೆ ಗೂಗಲ್ ಮ್ಯಾಪ್ ತೋರಿಸಿದೆ. ಇದರಿಂದ ಗೊಂದಲ ಆಗಿದೆ. 16 ಪೊಲೀಸ್ ಸಿಬ್ಬಂದಿಯಲ್ಲಿ ಮೂವರು ಮಾತ್ರ ಸಮವಸ್ತ್ರ ಧರಿಸಿದ್ದರು. ಮಿಕ್ಕವರು ನಾಗರಿಕರ ಡ್ರೆಸ್ನಲ್ಲಿದ್ದರು. ನಮ್ಮನ್ನು ನೋಡಿದ ಅಲ್ಲಿನ ಸ್ಥಳೀಯರು ಗೊಂದಲಕ್ಕೆ ಒಳಗಾದರು. ಅವರು ನಮ್ಮ ತಂಡದ ಮೇಲೆ ದಾಳಿ ಮಾಡಿದರು. ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.