ಹಿಂದು ಯುವಕನ ಮೇಲೆ ಹಲ್ಲೆ: 29 ಅನ್ಯ ಧರ್ಮೀಯರ ಮೇಲೆ ಎಫ್‌ಐಆರ್, 6 ಜನರ ಬಂಧನ

ಹೊಸದಿಗಂತ ರಾಯಚೂರು:

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ಮುಸ್ಲಿಂ ಯುವಕರ ಪುಂಡಾಟಿಕೆ. ಕ್ರೂಸರ್‌ಗೆ ಸೈಡ್ ಕೊಡದಿದ್ದಕ್ಕೆ ಹಿಂದೂಗಳ ಮನೆಗೆ ನುಗ್ಗಿ ದಾಂಧಲೆ ಮಾಡಿದ ಹಿನ್ನಲೆಯಲ್ಲಿ 29 ಮುಸ್ಲಿಂ ಯುವಕರ ಮೇಲೆ ಎಫ್‌ಐಆರ್ ದಾಖಲು ಆರು ಜನರ ಬಂಧನ ಮಾಡಲಾಗಿದೆ.

ಈ ಘಟನೆ 26ರ ರಾತ್ರಿ ಜರುಗಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಮುದ್ಗಲ್ ಪಟ್ಟಣದ ಅರವಿಂದ ಎಂಬ ಹಿಂದೂ ಯುವಕ ರಸ್ತೆಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಯುವಕ ರಘೀ ಮೆವಾಲಿ ಎಂಬಾತ ತಾನು ಚಲಾಯಿಸುತ್ತಿದ್ದ ಕ್ರೂಸರ್‌ಗೆ ಸೈಡ್ ಕೊಡುವಂತೆ ಹಾರ್ನ್ ಹಾಕಿದ್ದ. ಅರವಿಂದನಿಗೆ ಸೈಡ್ ಕೊಡುವುದಕ್ಕೆ ತಡವಾಗಿದೆ. ಇದೇ ವಿಚಾರಕ್ಕೆ ಈ ಇಬ್ಬರ ಮಧ್ಯೆ ವಾಗ್ವಾದ ಕೂಡ ಉಂಟಾಗಿದೆ ಆ ನಂತರ ಇಬ್ಬರು ಮನೆಗೆ ತೆರಳಿದ್ದಾರೆ.

ಆದರೆ ರಾತ್ರಿ ಸಮಯದಲ್ಲಿ ರಘೀ 20-30 ಜನರ ಗುಂಪಿನೊಂದಿಗೆ ಅರವಿಂದ ವಾಸಿಸುವ ನಗರದ ಹರಿಜನವಾಡೇಗೆ ಮಾರಕಾಸ್ತ್ರಗಳು ಸೇರಿದಂತೆ ದೊಣ್ಣೆಗಳನ್ನ ಕೈಯಲ್ಲಿ ಹಿಡಿದುಕೊಂಡು ಬಂದು ದಾಂಧಲೆ ಮಾಡಿದ್ದಾನೆ ಅಲ್ಲದೆ ಅವನಿಗೆ ಜೀವ ಬೆದರಿಕೆಯನ್ನು ಹಾಕಿದ್ದಾನೆ.

ಈ ಕುರಿತು ಅರವಿಂದನ ತಾಯಿ ಶರಣಮ್ಮ ಅವರು ಮುದಗಲ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!