ಹೊಸದಿಗಂತ ವರದಿ, ಕೊಪ್ಪಳ:
ದಲಿತ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾನಪ್ಪ ಗೊಂಡಬಾಳ, ದೇವೇಂದ್ರಪ್ಪ ಗೊಂಡಬಾಳ ಹಾಗೂ ನಿಂಗನಗೌಡ ಮಾಲಿಪಾಟೀಲ ಬಂಧಿತ ಆರೋಪಗಳು.
ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲಮ್ಮ ಸಿದ್ದಪ್ಪ ವಾಲ್ಮೀಕಿ ಅವರ ಮೇಲೆ ಕುಟುಗನಹಳ್ಳಿಯಲ್ಲಿ ಹಲ್ಲೆ ನಡೆದಿದೆ ಎಂದು ಎಂದು ದೂರು ದಾಖಲಾಗಿತ್ತು. ಪೊಲೀಸರು 16 ಜನರ ಮೇಲೆ ಎಫ್‌ಐಆರ್ ದಾಖಲಿಸಿ ಮೂರನ್ನು ಬಂಧಿಸಿದ್ದಾರೆ.
ಯಲ್ಲಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಕೆಲ ಸವರ್ಣೀಯ ಜಾತಿಯವರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಕುಟುಂಬದವರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುಟುಂಬದ ಮೂವರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.