ಮೋದಿ ಸಮರ್ಥ ನಾಯಕತ್ವದಡಿ ಡಬಲ್‌ ಎಂಜಿನ್‌ ಸರ್ಕಾರಗಳ ಗೆಲುವು: ಸಿಟಿ ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಪ್ರಧಾನಿ ಮೋದಿ ಸಮರ್ಥ ನಾಯಕತ್ವದಡಿ ದೇಶದ ಎಲ್ಲೆಡೆ ಡಬಲ್‌ ಎಂಜಿನ್‌ ಸರ್ಕಾರಗಳು ಗೆಲುವು ಸಾಧಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಬಣ್ಣನೆ ಮಾಡಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಫಲಿತಾಶ ಪ್ರಕಟವಾಗುತ್ತಿದ್ದಂತೆ ಸರಣಿ ಟ್ವಿಟ್‌ ಮಾಡಿರುವ ರವಿ, ಮತದಾರರು ಪ್ರತಿಪಕ್ಷಗಳ ಆಮಿಷಗಳಿಗೆ ಮರುಳಾಗದೆ ಬಿಜೆಪಿ ಅಭಿವೃದ್ಧಿ ರಾಜಕಾರಣವನ್ನು ಮೆಚ್ಚಿ ಮತ ಹಾಕಿರುವುದು ಸ್ಪಷ್ಟವಾಗಿದೆ. ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಬಿಜೆಪಿ ಹೊಸ ಇತಿಹಾಸವನ್ನು ಸೃಷ್ಟಿಮಾಡಿದೆ. ಬಿಜೆಪಿಯ ಗೆಲುವು ಜನರು ಮೆಚ್ಚಿನ ಮಗ ಮೋದಿಯವರ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಉತ್ತರ ಪ್ರದೇಶ, ಗೋವಾ, ಮಣಿಪುರ ಉತ್ತರಾಖಂಡಗಳಲ್ಲಿ ಸರ್ಕಾರ ರಚಿಸಲಿದ್ದು, ವಿಜಯೋತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!