ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿನ ಚುನಾವಣಾ ಮತ ಎಣಿಕೆಯ ಆರಂಭದಿಂದಲೂ ಬಿಜೆಪಿ ಮುನ್ನಡೆ ಕಾಯ್ದಿರಿಸಿಕೊಂಡು ಬಂದಿದ್ದು, ಆಡಳಿತ ಮುಂದುವರಿಸಲು ಯೋಗಿ ಆದಿತ್ಯನಾಥರಿಗೆ ಸುಲಭವಾಗಿದೆ.
ಈ ವೇಳೆ ಟ್ವೀಟ್ ಮಾಡಿ ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ರಾಜ್ಯದಲ್ಲಿನ ಜನತೆ ಗೆದ್ದಿದ್ದಾರೆ, ಗೂಂಡಾಗಿರಿ ಸೋತಿದೆ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಹೊಸ ಗಾಳಿ ಸೃಷ್ಟಿಯಾಗಿದೆ, ರಾಜ್ಯದಲ್ಲಿ ಸಮಾಜವಾದಿ ಪಾರ್ಟಿಯನ್ನು ವಾಶ್ ಔಟ್ ಮಾಡಿದ್ದೇವೆ. ಆದರೆ ಅಖಿಲೇಶ್ ಗೆ ಮಾತ್ರ ಅನವಶ್ಯಕ ಕೋಪಗೊಂಡಿದ್ದಾರೆ ಎಂದು ಟೀಕಾಪ್ರಹಾರ ಮಾಡಿದ್ದಾರೆ.
ಈ ಹೊತ್ತಿಗೆ ಬಿಜೆಪಿ 253, ಎಸ್ಪಿ 123 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿಕೊಂಡಿದೆ. ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯೋಕೆ 202 ಮ್ಯಾಜಿಕ್ ನಂಬರ್ ಅಗತ್ಯ, ಸದ್ಯ ಎಲ್ಲಾ ಸಮೀಕ್ಷೆ ಹಾಗೂ ಫಲಿತಾಂಶದ ತೀವ್ರತೆ ಗಮನಿಸಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಮತ್ತೆ ಆಡಳಿತಕ್ಕೆ ಬರುವುದು ಸ್ಪಷ್ಟವಾಗಿದೆ.