Saturday, February 4, 2023

Latest Posts

ವಿಧಾನಸಭಾ ಚುನಾವಣೆ: ಬಹುಜನ ಸಮಾಜ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹೊಸದಿಗಂತ ವರದಿ, ಮೈಸೂರು:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224ಸ್ಥಾನಗಳಲ್ಲೂ ಬಿಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಈಗಾಗಲೇ 125 ಮಂದಿ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದು, ಪಕ್ಷದ ರಾಷ್ಟಾçಧ್ಯಕ್ಷೆ ಮಾಯಾವತಿಯವರ ಅನುಮತಿ ಪಡೆದು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 100 ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳು, 50 ಕ್ಷೇತ್ರಗಳಿಗೆ ಒಬಿಸಿ ಅಭ್ಯರ್ಥಿಗಳು ಹಾಗೂ 24 ಕ್ಷೇತ್ರಗಳಲ್ಲಿ ಮೇಲ್ವರ್ಗದವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದರು.
ದಲಿತ ವಿರೋಧಿ ಚರಿತ್ರೆಯುಳ್ಳ ಕಾಂಗ್ರೆಸ್ ಪಕ್ಷವು ಯಾವ ವಿಧದಲ್ಲೂ ಬಿಜೆಪಿಗಿಂತ ಭಿನ್ನವಾಗಿಲ್ಲ. ಅಹಿಂದ ವರ್ಗಗಳಪಾಲಿಗೆ ಬಿಜೆಪಿಯು ಪ್ರಾಮಾಣಿಕ ಶತ್ರುವಾದರೆ, ಕಾಂಗ್ರೆಸ್ ಪಕ್ಷವು ಅಪ್ರಾಮಾಣಿಕ ಮಿತ್ರನಾಗಿದೆ ಎಂದು ಟೀಕಿಸಿದರು. ಸಂವಿಧಾನದ ಆಶಯಗಳನ್ನೇ ಪ್ರಣಾಳಿಕೆಯನ್ನಾಗಿಸಿಕೊಂಡಿರುವ ಬಹುಜನ ಸಮಾಜ ಪಕ್ಷದಿಂದ ಮಾತ್ರ ಅಹಿಂದ ವರ್ಗಗಳ ಅಭಿವೃದ್ಧಿಯಾಗುವುದೇ ಹೊರತು, ಕಾಂಗ್ರೆಸ್‌ನAಥ ಯಥಾಸ್ಥಿತಿವಾದಿ ಹಾಗೂ ಬಿಜೆಪಿಯಂಥ ಪಕ್ಷಗಳಿಂದ ಸಾಧ್ಯವಿಲ್ಲ ಎಂದರು.
ಕಾAಗ್ರೆಸ್‌ನವರು ತಾವು ಎಸ್.ಸಿ., ಎಸ್.ಟಿ.,ಓಬಿಸಿ., ಮತ್ತು ಅಲ್ಪಸಂಖ್ಯಾತರ ರಕ್ಷಕರು ಎಂದು ಹೇಳಿಕೊಂಡು ರಾಜ್ಯ ಮತ್ತು ಕೇಂದ್ರದಲ್ಲಿ ಅತಿ ಹೆಚ್ಚುಕಾಲ ಆಡಳಿತ ನಡೆಸಿದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಆಡಳಿತ ನಡೆಸುತ್ತಿದ್ದು, ಪರಿಶಿಷ್ಟರು ಮತ್ತು ಇತರ ದಮನಿತ ಸಮಾಜಗಳ
ಏಳಿಗೆ ಬಗ್ಗೆ ಯಾವುದೇ ರೀತಿಯಲ್ಲಿ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಇಡೀ ಹಗರಣವನ್ನು ಉಚ್ಛ ನ್ಯಾಯಾಲಯದ ಲಿಂಗಾಯಿತರಲ್ಲದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಜೊತೆಗೆ ಕಾಣೆಯಾಗಿರುವ 32 ಬಡ ಮಕ್ಕಳ ಬಗ್ಗೆ ತನಿಖೆ ನಡೆಸಿ, ಅವರನ್ನು ಪತ್ತೆಹಚ್ಚಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಂಯೋಜಕ ಹಾಗೂ ಕರ್ನಾಟಕ ಉಸ್ತುವಾರಿಯಾದ ಮಾರಸಂದ್ರ ಮುನಿಯಪ್ಪ, ರಾಜ್ಯಸಂಯೋಜಕ ಎಂ.
ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯ ದರ್ಶಿಗಳಾದ ಗಂಗಾಧರ್ ಬಹುಜನ್, ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಸ ಬಿ.ಆರ್.ಪುಟ್ಟಸ್ವಾಮಿ, ಉಪಾಧ್ಯಕ್ಷ ಶ್ರೀಕಂಠ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!