ಕಾಂಗ್ರೆಸ್, ಜೆಡಿಎಸ್ ಗೆ ಮೋದಿ ಕಂಡರೆ ನಡುಕ: ಸಚಿವ ಆರ್.ಅಶೋಕ್

ಹೊಸದಿಗಂತ ವರದಿ, ಕಲಬುರಗಿ:

ಕಾಂಗ್ರೆಸ್ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ನಾಯಕುಗಳಿಗೆ ನರೇಂದ್ರ ಮೋದಿ ಕಂಡರೆ ನಡುಕ ಹುಟ್ಟುತ್ತದೆ.ಹೀಗಾಗಿ ಅವರ ಬಗ್ಗೆ ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ನಗರದ ಐವನ್ ಎ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು,ಸಕಾ೯ರದ ದುಡ್ಡಲ್ಲಿ ಬಿಜೆಪಿ ಜಾತ್ರೆ ಮಾಡುತ್ತಿದೆ ಎಂದು ಹೇಳಿಕೆ ನೀಡಿದ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಹಕ್ಕು ಪತ್ರ ಎನ್ನುವುದು ಜೀವನದ ಆಧಾರ.ಹೀಗಾಗಿ ಸಕಾ೯ರ, ತಾಂಡಾಗಳಲ್ಲಿ ವಾಸಿಸುವ ಬಡವರಿಗೆ ಹಾಗೂ ಸೂರಿಲ್ಲದವರಿಗೆ ಸೂಸ್ಥಿರವಾದ ಮನೆ ನೀಡುವ ಐತಿಹಾಸಿಕ ಕಾಯ೯ಕ್ರಮ ಮಾಡುತ್ತಿದೆ.ಇದನ್ನು ಕುಮಾರಸ್ವಾಮಿ ಅವರು ಸ್ವಾಗತಿಸಬೇಕು ಎಂದರು.

ಕುಮಾರಸ್ವಾಮಿ ಅವರು ನರೇಂದ್ರ ಮೋದಿಯವರ ಬಗ್ಗೆ ಟಿಕೆ ಮಾಡುವ ಮುನ್ನ ನಾನು ಅವರನ್ನು ಪ್ರಶ್ನೆ ಮಾಡುತ್ತೇನೆ.ನಿಮ್ಮ ಅವಧಿಯಲ್ಲಿ ನೀವೆ ಅಧಿಕಾರದಲ್ಲಿದ್ದಾಗ ಹಕ್ಕು ಪತ್ರ ಕೊಡಬೇಕಿತ್ತು. ಯಾಕೆ ಕೊಡಲಿಲ್ಲ ಎಂದರು.

ಜೆಡಿಎಸ್ ಮೊದಲು 130 ಸ್ಥಾನದಲ್ಲಿ ಗೆದ್ದಿರುವ ಉದಾಹರಣೆ ಇವೆ.ನಂತರ 57 ಸ್ಥಾನಕ್ಕೆ ಬಂದಿದೆ.ಕಳೆದ ಬಾರಿ 35ಕ್ಕೆ ಬಂದಿದೆ.ಈ ಬಾರಿ ಅದು ಕೂಡ ಬರುವುದಿಲ್ಲ.ಇನ್ನೂ ಕೆಲವರು ಜೆಡಿಎಸ್ ತೊರೆಯಲು ಸಿದ್ದರಾಗಿದ್ದಾರೆ ಎಂದರು. ದಿನೇ ದಿನೇ ಜೆಡಿಎಸ್ ಪಕ್ಷದ ಗ್ರಾಸ್ ಲೆವಲ್ ಕಡಿಮೆಯಾಗುತ್ತಿದ್ದು,ಕಾಂಗ್ರೆಸ್ ಮತ್ತು ಬಿಜೆಪಿ, ಗೆ ಬಹುಮತ ಬರಬಾರದೆಂಬ ಲೆಕ್ಕ ಕುಮಾರಸ್ವಾಮಿ ಹೊಂದಿದ್ದು,ಇವುಗಳ ನಡುವೆ ನಾವು ನುಸಳಬೇಕು ಎಂಬ ಆಸೆ ಅವರಿಗೆ ಆಗಿದೆ ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಸ್ಯಾಂಟ್ರೋ ರವಿ ಬಂಧನ ಪ್ರಕರಣದ ಬಗ್ಗೆ ಮಾತನಾಡಿದ ಅವರು, ರವಿ ಮೇಲೆ ಅನೇಕ ವಷ೯ಗಳಿಂದ ದೂರುಗಳಿವೆ.ನಮ್ಮ ಕಾಲದಲ್ಲಿ ಆತನನ್ನು ಬಂಧನ ಮಾಡಲಾಗಿದೆ. ಅವನ ಆಸ್ತಿ ಮುಟ್ಟುಗೋಲು ಹಾಕಲು ಕೂಡ ನಮ್ಮ ಸಕಾ೯ರ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!