Tuesday, March 28, 2023

Latest Posts

Budget 2023 | ಸಿರಿಧಾನ್ಯ ಬೆಳೆಸಲು ಅನೇಕ ಯೋಜನೆಗಳ ಮೂಲಕ ನೆರವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಸಿರಿಧಾನ್ಯಗಳ ಮಹತ್ವ ಸಾರಿದ್ದಾರೆ. ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ್ದು, ಸಿರಿಧಾನ್ಯವನ್ನು ಶ್ರೀ ಅನ್ನ ಎಂದು ಹೆಸರಿಸಿದ್ದಾರೆ. ಸಿರಿಧಾನ್ಯ ಬೆಳೆಸಲು ಹಲವು ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಹೈದರಾಬಾದ್‌ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ಮಹತ್ವದ ಕೊಡುಗೆಯಾಗಿ ನೀಡಿದ್ದೇವೆ. ಸಿರಿಧಾನ್ಯ ಉತ್ಪಾದನೆ ಮಾಡುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!