Saturday, April 1, 2023

Latest Posts

Budget 2023 | ಸರ್ಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಇನ್ಮುಂದೆ ಪ್ಯಾನ್ ಸಾಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ 2023-24 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಡಿಜಿಟಲ್ ವ್ಯವಸ್ಥೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಸಾಮಾನ್ಯ ಗುರುತಿನ ಸಾಧನವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಇದು ವ್ಯವಹಾರಗಳ ಅನುಸರಣೆ ಹೊರೆಯನ್ನು ಸರಾಗಗೊಳಿಸುವ ನಿರೀಕ್ಷೆಯಿದೆ.

ಅನನ್ಯ ಐಡೆಂಟಿಫೈಯರ್ ಪ್ಯಾನ್‌ ಅನ್ನು ಬಳಸಿಕೊಂಡು, ಸಾಮಾನ್ಯ ಮಾಹಿತಿ ಮತ್ತು ದಾಖಲೆಗಳನ್ನು ಸ್ವಯಂ-ಪಡೆಯಬಹುದು. ಈ ನಿರ್ಧಾರದಿಂದ ಆದಾಯ ತೆರಿಗೆ ಇಲಾಖೆ (Income Tax Department) ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಲ್ಲಿ ಕೆವೈಸಿ ಪ್ರಕ್ರಿಯೆ ಪ್ಯಾನ್​ಕಾರ್ಡ್ ಹೊಂದಿರುವವರಿಗೆ ಸುಲಭವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!