Wednesday, October 5, 2022

Latest Posts

ದಿನಭವಿಷ್ಯ | ನೀವು ಸಾಧಿಸ ಬಯಸುವ ಗುರಿ ಇಂದು ಸನಿಹವಾಗಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕೆಲಸದ ಒತ್ತಡದಿಂದ ಹೊರಬಂದು ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಬಿಡುವು ಮಾಡಿಕೊಳ್ಳಿ. ಅದರಲ್ಲಿ ಸಂತೋಷ ಕಾಣುವಿರಿ. ಕೌಟುಂಬಿಕ ಸಮ್ಮಿಲನ.

ವೃಷಭ
ಕುಟುಂಬ ಸದಸ್ಯರ ಜತೆ ಭಿನ್ನಮತ, ವಾಗ್ವಾದ ಏರ್ಪಡಬಹುದು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.

ಮಿಥುನ
ನೀವು ಸಾಧಿಸ ಬಯಸುವ ಗುರಿ ಸನಿಹ ವಾಗಲಿದೆ. ಕಷ್ಟಗಳು ಎದುರಾದರೂ ಅವು ಪರಿಹಾರ ಕಾಣುವವು. ಹಣದ ಬಿಕ್ಕಟ್ಟು ನಿವಾರಣೆ.

ಕಟಕ
ಬಿಗುಮಾನ ಬದಿಗಿಟ್ಟು ವ್ಯವಹರಿಸಿದರೆ ಕಾರ್ಯದಲ್ಲಿ ಸಫಲತೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಸಂಕಷ್ಟ ನಿವಾರಣೆ, ಧನಪ್ರಾಪ್ತಿ.

ಸಿಂಹ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರಲಿದೆ. ಇತರರ ಸಹಕಾರ ಲಭ್ಯ.

ಕನ್ಯಾ
ಕೆಲ ವಿಷಯಗಳಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಮೂಲಕ ಮನೆಯಲ್ಲಿನ ಶಾಂತಿ ಕದಡದಿರಿ. ಹೊಂದಾಣಿಕೆ ಕೂಡ ಮುಖ್ಯ , ಅರಿಯಿರಿ.

ತುಲಾ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.

ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚು ಜವಾಬ್ದಾರಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಸ್ನೇಹಿತರ ಜತೆ ಕಾಲ ಕಳೆಯುವ ಅವಕಾಶ. ಆಹಾರ ಹಿತಮಿತವಾಗಿರಲಿ.

ಧನು
ಕಠಿಣ ಹೊಣೆಗಾರಿಕೆ ಹೆಗಲೇರಿದರೂ ಸಹೋದ್ಯೋಗಿಗಳ ಉತ್ತಮ ಸಹಕಾರ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಬೆಳವಣಿಗೆ.

ಮಕರ
ಸಾಂಸಾರಿಕ ಬದುಕಿನಲ್ಲಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ವರ್ತಿಸುವುದು ಅವಶ್ಯ. ಇದರಿಂದ ವೃತ್ತಿಯ ಮೇಲೂ ಪರಿಣಾಮ.

ಕುಂಭ
ಸಹೋದ್ಯೋಗಿಗಳ ಜತೆ ಸಂವಹನ ಕೊರತೆಯಿಂದ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಧೈರ್ಯದಿಂದ ಅದನ್ನು ಎದುರಿಸಿ.

ಮೀನ
ಕಠಿಣ ಪರಿಶ್ರಮ.  ಅದರ ಫಲವೂ ಸಿಹಿ. ಖಾಸಗಿ ಬದುಕಲ್ಲಿ ಭಾವನಾತ್ಮಕ ಏರುಪೇರು. ಆಪ್ತರಿಂದ  ನಿಮ್ಮ ಅಹವಾಲು ನಿರಾಕರಣೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!