Wednesday, September 28, 2022

Latest Posts

ಲೋಕ ಸೇವಕ ಸಂಘಟನೆ ಸೇರಿ ದೇಶಕ್ಕಾಗಿ ಹೋರಾಡಿದ ಧೀರ ದೇವರಾಜ್ ಸೇಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇವರಾಜ್ ಸೇಥಿ ಅವರು ಪಂಜಾಬ್‌ನ ಜಾಂಗ್ ಗ್ರಾಮದಲ್ಲಿ ಜನಿಸಿದರು. ಎಂ.ಎ ಶಿಕ್ಷಣ ಪಡೆದಿದ್ದ ಅವರು ಕಾಂಗ್ರಿ ಗುರುಕುಲದಲ್ಲಿ ಕೆಲ ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದರು. ನಂತರ ಲಾಲಾ ಲಜಪತ್ ರಾಯ್ ಅವರ ಲೋಕ ಸೇವಕ ಸಂಘ (ಸರ್ವಂಟ್ಸ್ ಆಫ್ ಪೀಪಲ್ಸ್ ಸೊಸೈಟಿ)ವನ್ನು ದೇಶ ಸೇವೆಯ ಉದ್ದೇಶದಿಂದ ಸೇರಿಕೊಂಡರು. ಉಗ್ರ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದಕ್ಕೆ ಅವರು 1921ರಲ್ಲಿ 5 ತಿಂಗಳ ಕಾಲ ಜೈಲು ಪಾಲಾಗಿದ್ದರು. ನಂತರ 1932 ರಲ್ಲಿಯೂ ಒಂದು ವರ್ಷ ಕಾಲ ಜೈಲಿನಲ್ಲಿದ್ದರು. 1941 ರಲ್ಲಿ ಅವರು ಏಕಾಂಗಿಯಾಗಿ ನಡೆಸಿದ ಸತ್ಯಾಗ್ರಹಕ್ಕಾಗಿ ಒಂಬತ್ತು ತಿಂಗಳುಗಳ ಕಾಲ ಮತ್ತು 1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಆಭಗಿಯಾಗಿದ್ದಕ್ಕೆ ಸುಮಾರು ಮೂರು ವರ್ಷಗಳ ಕಾಲ ಗೃಹಬಂಧನದಲ್ಲಿದ್ದರು. ಸೇಥಿ  ಅವರು 1938 ರಲ್ಲಿ ಉಪಚುನಾವಣೆಯಲ್ಲಿ ಚುನಾಯಿತರಾಗಿ ಪಂಜಾಬ್ ಅಸೆಂಬ್ಲಿಯ ಸದಸ್ಯರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!