ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅಂತಿಮವಾಗಿ ಭೂಮಿಗೆ ಮರಳಲು ಸಜ್ಜಾಗುತ್ತಿದ್ದಾರೆ.
ಆರಂಭದಲ್ಲಿ ಬೋಯಿಂಗ್ ಸ್ಮಾರ್ಲೈನರ್ನಲ್ಲಿ 10 ದಿನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಇವರಿಬ್ಬರು ಒಂಬತ್ತು ತಿಂಗಳುಗಳಿಂದ ಸಿಕ್ಕಿಬಿದ್ದಿದ್ದಾರೆ. ಇದೀಗ ಮಾರ್ಚ್ 16 ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಖಚಿತಪಡಿಸಿದೆ.
ಬೋಯಿಂಗ್ ಸ್ಮಾರ್ಲೈನರ್ ಟ್ರಸ್ಟರ್ ಸಮಸ್ಯೆಗಳು ಮತ್ತು ಹೀಲಿಯಂ ಸೋರಿಕೆಯನ್ನು ಎದುರಿಸಿದಾಗ ಮರಳದೆ ಉಳಿದಿದ್ದ ನಾಸಾದ ಬ್ಯಾರಿ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಹಿಂಪಡೆಯುವುದು ಉದ್ದೇಶವಾಗಿದೆ.